ಹೈದರಾಬಾದ್: 48 ವರ್ಷದ ಅತ್ತೆಯ ಮೇಲೆ ಅಳಿಯನೇ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆಯೊಂದು ಹೈದರಾಬಾದ್‍ನ ಪುಂಜಗುತ್ತ ಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮದ್ಯದ ನಶೆಯಲ್ಲಿ ಮನೆಗೆ ಬಂದ 34 ವರ್ಷದ ಅಳಿಯ, ನೇರವಾಗಿ ಅತ್ತೆ ಇದ್ದ ಕೋಣೆಗೆ ತೆರಳಿದ್ದಾನೆ. ಅಲ್ಲಿ ಆತನ ಅತ್ತೆ ಮಲಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅಳಿಯ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಕಳೆದ ಕೆಲ ವರ್ಷಗಳಿಂದ ಮಹಿಳೆ ತನ್ನ ಮಗಳು ಮತ್ತು ಅಳಿಯನ ಜೊತೆ ವಾಸವಾಗಿದ್ದರು. ಘಟನೆ ನಡೆದ ದಿನ ಮಗಳು ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದರು. ಈ ವೇಳೆಯೇ ಕುಡಿದ ಬಂದ ಅಳಿಯ ಅತ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಹಿಳೆ ನೀಡಿದ ದೂರಿನಂತೆ ಐಪಿಸಿ ಸೆಕ್ಷನ್ 376(ಅತ್ಯಾಚಾರ)ರ ಅಡಿಯಲ್ಲಿ ಅಳಿಯನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆರೋಪಿ ತನ್ನ ಪತ್ನಿಯ ಜೊತೆ ಕ್ಷಮೆ ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.