ಕಲಬುರಗಿ: ಪ್ರಸಿದ್ಧ ದೇಗುಲಗಳ ಹುಂಡಿ ಎಣಿಕೆ ಕಾರ್ಯ ಮಾಡುವಾಗ ಅನೇಕ ರೀತಿಯ ಚೀಟಿಗಳು ಸಿಗುತ್ತವೆ. ಇವುಗಳಲ್ಲಿ ಪ್ರೀತಿ-ಪ್ರೇಮ, ಮದುವೆ, ಪತಿ-ಪತ್ನಿ, ಅತ್ತೆ-ಸೊಸೆ ನಡುವಿನ ಜಗಳಗಳು, ಪಕ್ಕದಮನೆಯವರ ವಿಚಾರ ಹೀಗೆ ದೇವರಿಗೆ ಹರಕೆ ಕಟ್ಟಿ ಚೀಟಿ ಬರೆದು ಹಾಕುವುದನ್ನು ನೋಡಿರುತ್ತೇವೆ. ಅಂಥದ್ದೇ ವಿಚಾರವೊಂದು ಇದೀಗ ಕಲಬುರಗಿಯಲ್ಲಿಯೂ ಬೆಳಕಿಗೆ ಬಂದಿದೆ.
Advertisement
ಕೆಲ ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ವಿಶೇಷ ನೋಟ್ ಸಿಕ್ಕಿದೆ. ಈ ನೋಟಿನಲ್ಲಿ ಬರೆದಿದ್ದನ್ನು ಓದಿದ ಹುಂಡಿ ಎಣಿಕಾರ್ಯ ಮಾಡುತ್ತಿರುವ ಸಿಬ್ಬಂದಿಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಿಸಿ ಬಿಸಿ; 4 ವರ್ಷದ ದಾಖಲೆ ಮುರಿದ ಸಿಲಿಕಾನ್ ಸಿಟಿ
Advertisement
Advertisement
ಚೀಟಿಯಲ್ಲಿ ಏನಿತ್ತು..?: ಸೊಸೆಯೊಬ್ಬಳು ತನ್ನ ಅತ್ತೆಯ ಮೇಲಿನ ಸಿಟ್ಟನ್ನು ಈ ನೋಟಿನಲ್ಲಿ ಬರೆಯುವ ಮುಖಾಂತರ ತೋರಿಸಿಕೊಂಡಿದ್ದಾಳೆ. ಅತ್ತೆ ಬೇಗ ಸಾಯಬೇಕು ಎಂದು ಹರಕೆ ಹೊತ್ತಿದ್ದಾಳೆ. ಅಲ್ಲದೆ 50 ರೂಪಾಯಿ ನೋಟಿನ ಮೇಲೆ “ಅತ್ತೆ ಬೇಗ ಸಾಯಬೇಕು” ಎಂದು ಬರೆದು ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.