ತುಮಕೂರು: ನಾನೇನು ತಪ್ಪು ಮಾಡಿಲ್ಲ, ನನ್ನ ಪತಿ ಸಾವಿಗೆ ಅತ್ತೆಯೇ ಕಾರಣವಾಗಿದ್ದಾರೆ. ನಮ್ಮ ಅತ್ತೆ ಹೋಗಿ ಸಾಯಿ ಎಂದು ನನ್ನ ಪತಿಗೆ ಹೇಳಿದ್ರು, ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಂಕರಣ್ಣ ಪತ್ನಿ ಮೇಘನಾ ಗಂಭೀರ ಆರೋಪ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೇಘನಾ, ರಾತ್ರಿ ನೇಣಿಗೆ ಶರಣಾಗಿದ್ದಾರೆ. ನಮಗೆ ಬೆಳಗ್ಗೆ ಗೊತ್ತಾಗಿದೆ. ಅತ್ತೆ, ಸೊಸೆ ಜಗಳದಿಂದ ನನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸುಳ್ಳು. ನನಗೆ ಬೆಂಗಳೂರಿಗೆ ಹೋಗಿ ಜೀವನ ನಡೆಸಬೇಕು ಎನ್ನುವ ಉದ್ದೇಶ ಇರಲಿಲ್ಲ. ಹಾಗಿದ್ದರೆ ನಾನು ಯಾಕೆ ಇವರನ್ನು ಮದುವೆಯಾಗುತ್ತಿದ್ದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಶಂಕರಣ್ಣ..?
Advertisement
Advertisement
ನನ್ನ ಪತಿ ಸಹೋದರಿ ಪಾತ್ರೆ ತೊಳೆಯುತ್ತಿದ್ದರು. ನಾನು ಸುಮ್ಮನೆ ಕುಳಿತಿದ್ದೆ. ಆಗ ನಮ್ಮ ಅತ್ತೆ ಬಂದು ನನಗೆ ಬೈದಿದ್ದರು. ಇದರಿಂದ ಬೇಜಾರಾಗಿ ನಾನು ಕಣ್ಣೀರು ಹಾಕುತ್ತಾ ಮಲಗಿದ್ದೆ. ಆಗ ನನ್ನ ಪತಿ ಬಂದು ವಿಚಾರಿಸಿದರು. ಆಗಿನಿಂದ ನಮ್ಮ ಮನೆಯಲ್ಲಿ ಜಗಳ ಪ್ರಾರಂಭವಾಯಿತು. ನಿನ್ನ ಹೆಂಡತಿ ನಮ್ಮನ್ನು ಹೊಡೆಯಲು ಬಂದಿದ್ದಾಳೆ ಎಂದು ಪತಿ ಮುಂದೆ ನನ್ನನ್ನು ದೂರುತ್ತಾ ಅತ್ತೆ ಜಗಳ ಮಾಡುತ್ತಲೇ ಇದ್ದರು ಎಂದರು. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ
Advertisement
ಒಂದು ದಿನ ಕಟ್ಟಿರುವ ನಾಯಿಯನ್ನು ನಾನು ಬಿಟ್ಟಿದ್ದೆ. ಆಗ ನಮ್ಮ ಅತ್ತೆ ನಿನ್ನ ಪತ್ನಿ ನಾಯಿ ಬಿಟ್ಟಳು. ನಾನು ಸಾಕಿದ್ದ ನಾಯಿಯನ್ನು ಅವಳು ಯಾಕೆ ಬಿಡಬೇಕು ಎಂದು ನಮ್ಮ ಅತ್ತೆ ಮತ್ತೆ ಗಲಾಟೆ ಮಾಡಲು ಪ್ರಾರಂಭಿಸಿದ್ದರು. ಆಗ ಪತಿ, ನಿಮ್ಮ ಇಬ್ಬರಲ್ಲಿ ಯಾರಿಗೂ ಬುದ್ಧಿ ಹೇಳಲು ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದರು. ನಮ್ಮ ಅತ್ತೆ ಹೋಗಿ ನೀನು ಸಾಯಿ ಎಂದು ನನ್ನ ಪತಿಗೆ ಹೇಳಿದರು. ನಾನು ಸತ್ತರೆ ನೆಮ್ಮದಿಯಾಗಿ ಇರುತ್ತೀಯೆಂದು ನನ್ನ ಪತಿ ಹೇಳಿ ಹೊರಟು ಹೋದವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.