– ಮನೆ ಮುಂದೆಯೇ ಆಹೋರಾತ್ರಿ ಧರಣಿ ಕೂತ ಪತ್ನಿ
ಚಿಕ್ಕಬಳ್ಳಾಪುರ: ಅವರದ್ದು ಶ್ರೀಮಂತ ಕುಟುಂಬ ಪ್ರತಿಷ್ಠಿತ ಶಾಲೆಯೂ ಸಹ ಇದೆ. ಆದರೆ ಆ ಕುಟುಂಬದಲ್ಲಿ ಮಕ್ಕಳಾಗಲಿಲ್ಲ ಅನ್ನೋ ಕಾರಣಕ್ಕೆ ಸೊಸೆಯನ್ನೇ ಅತ್ತೆ ಮನೆಯಿಂದ ಹೊರಹಾಕಿದ್ದಾರಂತೆ. ಇದರಿಂದ ನೊಂದ ಪತ್ನಿ ತನಗೆ ಗಂಡ ಬೇಕು ಅತ್ತೆ ಮನೆಯಲ್ಲೇ ಸಂಸಾರ ಮಾಡಬೇಕು ಅಂತ ಆಹೋರಾತ್ರಿ ಮನೆ ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದಾಳೆ.
ಅಂದಹಾಗೆ ಜಬೀನ್ ತಾಜ್ ಹಾಗೂ ಚಿಕ್ಕಬಳ್ಳಾಪುರ (Chikkaballapur) ನಗರದ ಮುನಿಸಿಪಾಲ್ ಬಡಾವಣೆ ನಿವಾಸಿ ಮುಕ್ತಿಯಾರ್ ಅಹಮದ್‍ಗೆ ಮದುವೆಯಾಗಿ ಸರಿಸುಮಾರು 09 ವರ್ಷಗಳೇ ಕಳೆದಿವೆ. ಆದರೆ ಈ ದಂಪತಿಗೆ ಇದುವರೆಗೂ ಮಕ್ಕಳಾಗಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪದೇ ಪದೇ ಕೌಟುಂಬಿಕ ಕಲಹ ಸಮಸ್ಯೆಗಳು ಕಾಡತೊಡಗಿವೆ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್
Advertisement
Advertisement
ಇಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಅಂತ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಮೂಲ ಕಾರಣ ಮಕ್ಕಳಾಗಿಲ್ಲ ಅನ್ನೋದು ಆರೋಪ. ಹೀಗಾಗಿ ಮುಕ್ತಿಯಾರ್ ಅಹಮದ್ ತಾಯಿ ಜಬೀನ್ ತಾಜ್ ರ ಅತ್ತೆ ನ್ಯಾಮತಿ ಬೇಗಂ ಮಕ್ಕಳಾಗಲಿಲ್ಲ ಅಂತ ಸೊಸೆಯನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳದೆ ಹೊರಗೆ ಹಾಕಿದ್ದಾಳಂತೆ. ಇದರಿಂದ ನೊಂದ ಜಬೀನ್ ತಾಜ್ ಅತ್ತೆಯ ಮನೆಯ ಎದುರೇ ಕೂತು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.
Advertisement
ಅಂದಹಾಗೆ ಕಳೆದ 1 ವರ್ಷದಿಂದ ಅತ್ತೆ-ಸೊಸೆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ ಗಂಡ ಮುಕ್ತಿಯಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬೇರೊಂದು ಮನೆ ಮಾಡಿ ಹೆಂಡತಿಯನ್ನ ಅಲ್ಲಿ ಬಿಟ್ಟಿದ್ದ. ಆದರೆ ಆರಂಭದಲ್ಲಿ ವಿಜಯಪುರಕ್ಕೆ ಹೋಗಿ ಬರುತ್ತಿದ್ದ ಗಂಡ ಮುಕ್ತಿಯಾರ್ ಅಹಮದ್ ಬರ ಬರುತ್ತಾ ಹೆಂಡತಿ ಮನೆಗೆ ಹೋಗೋದನ್ನೆ ನಿಲ್ಲಿಸಿದ್ದಾನಂತೆ. ಹೆಂಡತಿ ಕರೆ ಮಾಡಿದ್ರೂ ಬ್ಲಾಕ್ ಲಿಸ್ಟ್‍ಗೆ ಹಾಕಿ ಹೆಂಡತಿ ಜೊತೆ ಮಾತಾಡೋದನ್ನ ಸಹ ಬಿಟ್ಟಿದ್ದನಂತೆ. ಇದ್ರಿಂದ ರೋಸಿ ಹೋದ ಜಬೀನಾತಾಜ್ ಈಗ ಅತ್ತೆಯ ಮನೆಯ ಎದುರೇ ಧರಣಿ ಕೂತು ನಾನು ಗಂಡನ ಜೊತೆ ಇದೇ ಮನೆಯಲ್ಲಿ ಸಂಸಾರ ಮಾಡ್ತೇನೆ ಅಂತ ಪಟ್ಟು ಹಿಡಿದಿದ್ದಾಳೆ.
Advertisement
ಇತ್ತ ಗಂಡ ನನ್ನ ಹೆಂಡತಿ ಸುಖಾಸುಮ್ಮನೆ ಟಾರ್ಚರ್ ಕೊಡ್ತಾಳೆ, ಕಾಟ ತಡೆಯೋಕೆ ಆಗ್ತಿಲ್ಲ. ನನ್ನ ಬಾಯಿಗೆ ಬಂದ ಹಾಗೆ ಬೈತಾಳೆ. ಹಾಗಾಗಿ ನಾನು ಆಕೆಗೆ ಡಿವೋರ್ಸ್ ಕೊಡೋಕೆ ಮುಂದಾಗಿದ್ದೇನೆ ಅಂತಾನೆ. ಆದರೆ ಇತ್ತ ಪಟ್ಟು ಬಿಡದ ಜಬೀನಾತಾಜ್ ವಿಜಯಪುರದಿಂದ ಬಂದು ಅತ್ತೆ ಮನೆಯ ಎದುರು ಧರಣಿ ಕೂರುತ್ತಿದ್ದಂತೆ. ಇನ್ನು ಅತ್ತೆ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಆದರೂ ಪಟ್ಟು ಬಿಡದ ಜಬೀನಾ ತಾಜ್ ಮೂರು ದಿನಗಳಿಂದ ಏಕಾಂಗಿಯಾಗಿ ಆಹೋರಾತ್ರಿ ಧರಣಿ ಮುಂದುವರಿಸಿದ್ದು ನಾನು ಎಷ್ಟೇ ದಿನ ಆದ್ರೂ ಇಲ್ಲೇ ಇರ್ತೇನೆ ಅಂತ ಕೂತಿದ್ದಾಳೆ. ಗಂಡ ಬಂದು ವಿಜಯಪುರದ ಮನೆಗೆ ಹೋಗೋಣ ಬಾ ಅಂದ್ರೂ ಹೋಗದೆ ಅತ್ತೆ ಮನೆ ಎದುರೇ ಆಹೋರಾತ್ರಿ ಧರಣಿ ಮುಂದುವರಿಸಿದ್ದಾಳೆ.
Web Stories