ಚಾಮರಾಜನಗರ: ಅಪ್ಪು ಬಾಲ್ಯ ಕಳೆದ ಊರಲ್ಲಿ ಸೂತಕದ ಕಾರ್ಮೋಡ ಇನ್ನೂ ಮುಗಿದಿಲ್ಲ. ಗಾಜನೂರಿನ ಪ್ರತಿಯೊಂದು ಮನೆಯಲ್ಲೂ ನೀರವ ಮೌನ ಆವರಿಸಿದೆ. ಅತ್ತೆ ನಾಗಮ್ಮಗೆ ಅಪ್ಪು ಅಗಲಿಕೆ ಸುದ್ದಿ ಇನ್ನೂ ಗೊತ್ತೇ ಇಲ್ಲ. ಈ ಮೂಲಕ ಕುಟುಂಬಸ್ಥರು ಕೂಡ ಅಪ್ಪು ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ.
Advertisement
ಡಾ.ರಾಜ್ ಗಾಜನೂರಿನ ಸಂಬಂಧಿಗಳು ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಗಾಜನೂರಿನಲ್ಲಿ ಅಪ್ಪು ಬೆಳೆದಿದ್ದು, ತುಂಟಾಟಗಳು, ಅಚ್ಚು ಮೆಚ್ಚಿನ ಊಟವನ್ನೆಲ್ಲಾ ನೆನೆದು ಕಣ್ಣೀರಾಗುತ್ತಿದ್ದಾರೆ. ಅದರಲ್ಲೂ ಡಾ. ರಾಜ್ ಸಹೋದರಿ, ಅಪ್ಪು ಅತ್ತೆ ನಾಗಮ್ಮಗೆ ಅಪ್ಪು ಅಗಲಿರೋ ಸುದ್ದಿಯನ್ನು ತಿಳಿಸಿಯೇ ಇಲ್ಲ. ನಾಗಮ್ಮ ಅವರ ಆರೋಗ್ಯ ಹದಗೆಟ್ಟಿರೋದ್ರಿಂದ ವಿಷಯ ಮುಚ್ಚಿಟ್ಟಿದ್ದಾರೆ. ಇನ್ನೂ ಬೆಳೆದು ಬಾಳಬೇಕಾದ ಮನೆ ಮಗ ಇನ್ನಿಲ್ಲ ಅನ್ನೋದೇ ನೋವು ಅಂತ ಅಪ್ಪು ಸೋದರ ಮಾವ ಗೋಪಾಲ್ ಕಣ್ಣೀರಿಟ್ಟಿದ್ದಾರೆ.
Advertisement
Advertisement
ಗಾಜನೂರಿನ ಆಡಿ ಬೆಳೆದ ಮನೆಯನ್ನು ಅಪ್ಪು ಎಂದೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಊರಿಗೆ ಹೋದಾಗ ಪ್ರತಿಬಾರಿ ಹಳೇ ಮನೆಗೆ ಭೇಟಿ ಕೊಡ್ತಿದ್ರು. ಪುನೀತ್ ನೋಡಲು ಮುಗಿಬೀಳ್ತಿದ್ದ ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ ಅದೆಲ್ಲ ಇನ್ಮುಂದೆ ಆಗಲ್ಲ ಅಂತ ಗಾಜನೂರಿನ ಸ್ಥಳೀಯರು ಅಪ್ಪು ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಕ್ಕರೆಬೈಲು ಆನೆ ಬಿಡಾರದ ಮರಿ ಆನೆಗೆ ಅಪ್ಪು ಹೆಸರು ನಾಮಕರಣ
Advertisement
ಅಪ್ಪು ಗಾಜನೂರಿಗೆ ಬಂದಾಗಲೆಲ್ಲ ತಾವೊಬ್ಬ ದೊಡ್ಡ ಸ್ಟಾರ್ ಅನ್ನೋದನ್ನ ಮರೆತು ಎಲ್ಲರಲ್ಲಿ ಒಬ್ಬರಾಗಿ ಬಿಡುತ್ತಿದ್ದರು. ಊರಿನಲ್ಲಿರುವ ಗೆಳೆಯರನ್ನು ಕೂಡ ಭೇಟಿಯಾಗಿ ಸಮಯ ಕಳೆಯುತ್ತಿದ್ದರು. ಕುಟುಂಬಸ್ಥರೊಂದಿಗೆ ಪುನೀತ್ ಜೊತೆ ಫೋಟೋಯೆಲ್ಲ ತೆಗೆಸಿಕೊಂಡಿದ್ವಿ ಅಂತ ಗ್ರಾಮಸ್ಥರು ಗದ್ಗದಿತರಾಗುತ್ತಾರೆ. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?
ವರನಟ ಡಾ.ರಾಜ್‍ಕುಮಾರ್ ತಂದೆಯ ಊರು ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು. ಇಲ್ಲಿಗೆ ಕುಟುಂಬ ಸಮೇತ ಬಂದಾಗ ಉಳಿದುಕೊಳ್ಳಲು ಮನೆಯನ್ನೂ ಕಟ್ಟಿಸಿದ್ರು. ಆದರೆ ಗೃಹಪ್ರವೇಶಕ್ಕೂ ಮೊದಲೇ ಕೊನೆಯುಸಿರೆಳೆದ್ರು ಅಂತ ಸ್ಥಳೀಯರು ಭಾವುಕರಾಗಿದ್ದಾರೆ. ತಂದೆಯ ನಿಧನದ ನಂತರ ಮಕ್ಕಳು ಗೃಹ ಪ್ರವೇಶ ಮಾಡಿದರು. ಊರಿನ ಜನರು ನೀರಿಗೆ ಕಂದಾಯ ಕಟ್ಟದಂತೆ 50 ಸಾವಿರ ಹಣವನ್ನು ಕೂಡ ಅಂದೇ ಡೆಪಾಸಿಟ್ ಇಟ್ಟಿದ್ದರು. ಇನ್ನು ಅಪ್ಪು ಊರಿಗೆ ಬಂದಾಗೆಲ್ಲ ಪ್ರೀತಿಯಿಂದ ಮಾತನಾಡಿಸ್ತಿದ್ರು ಅಂತ ನೆನಪಿಸಿಕೊಂಡು ಗ್ರಾಮಸ್ಥರು ಭಾವುಕರಾಗಿದ್ದಾರೆ.
ಗಾಜನೂರು ಪಕ್ಕದ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈ ಗ್ರಾಮದಲ್ಲಿ ಪ್ರತಿ ವರ್ಷ ಸಗಣಿಯಲ್ಲಿ ಹೊರಳಾಡುವ ಗೊರೆಹಬ್ಬ ಆಚರಿಸಲಾಗುತ್ತೆ. ಆದರೆ ಈ ಬಾರಿ ಅಕಾಲಿಕ ನಿಧನ ಹೊಂದಿದ ಪುನೀತ್ ಭಾವಚಿತ್ರ ಹಿಡಿದು ಗ್ರಾಮಸ್ಥರು ಜೈಕಾರ ಕೂಗಿ ನಮನ ಸಲ್ಲಿಸಿದ್ದಾರೆ.