ಹುಬ್ಬಳ್ಳಿ: ತಾಯಿಯೊಬ್ಬರು ಏಕಕಾಲದಲ್ಲಿ ಎರಡು ಹೆಣ್ಣು ಹಾಗೂ ಒಂದು ಗಂಡು ಸೇರಿ ಮೂವರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಸವದತ್ತಿ (Savadatti) ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ನಿವಾಸಿ ವರ್ಷಿಣಿ ಹಾಗೂ ಪಂಚಾಕ್ಷರಿ ದಂಪತಿಗಳಿಗೆ ತ್ರಿವಳಿ ಮಕ್ಕಳು ಜನಿಸಿವೆ.ಇದನ್ನೂ ಓದಿ: ಮಿಗ್-21 ಯುದ್ಧ ವಿಮಾನದ 62 ವರ್ಷಗಳ ಸೇವೆಗೆ ವಿದಾಯ – ಸೆ. 19ರಂದು ಬೀಳ್ಕೊಡುಗೆ ಸಮಾರಂಭ
ದಂಪತಿಗೆ ಈಗಾಗಲೇ ಆರು ವರ್ಷದ ಒಂದು ಹೆಣ್ಣು ಮಗುವಿದೆ. ಈಗ ಮತ್ತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಡಾ. ಸುಧಾ ಹಳೇಮಣಿ ಹಾಗೂ ವೈದ್ಯರ ತಂಡ ವರ್ಷಿಣಿ ಅವರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವರ್ಷಿಣಿ ಅವರು ಎರಡು ಹೆಣ್ಣು, ಒಂದು ಗಂಡು ಸೇರಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ವರ್ಷಣಿ ಹಾಗೂ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಮೂರು ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದು, ತ್ರಿವಳಿ ಮಕ್ಕಳು ಹುಟ್ಟಿರುವ ಕಾರಣ ಕುಟುಂಬದಲ್ಲಿ ಸಂತಸ ಮನೆಮಾಡಿದೆ.ಇದನ್ನೂ ಓದಿ: ಜಗನ್ನಾಥ ರಥಯಾತ್ರೆಯಲ್ಲಿ ಸರಗಳ್ಳತನ – ನಾಲ್ವರು ಚಾಲಾಕಿ ಕಳ್ಳಿಯರ ಬಂಧನ