ಪಾಟ್ನಾ: ಮನೆ, ಕುಟುಂಬ ಅಂದ್ಮೇಲೆ ಕಷ್ಟ, ಜಗಳಗಳು ಸಾಮನ್ಯವಾಗಿ ನಡೆಯುತ್ತಿರುತ್ತವೆ. ಆದ್ರೆ ಮಹಿಳೆಯೊಬ್ಬಳು ಮನೆಯಲ್ಲಿ ಶಾಂತಿ ಇಲ್ಲ, ಒಂದರ ಮೇಲೊಂದು ಕಷ್ಟಗಳು ಎದುರಾಗುತ್ತಿವೆ ಅಂತಾ ತಾನು ಹೆತ್ತ ಮಕ್ಕಳಿಗೆ ವಿಷ ಉಣಿಸಿರುವ ಹೃದಯ ವಿದ್ರಾವಕ ಘಟನೆ ಬಿಹಾರ ರಾಜ್ಯದ ಗೋಪಾಲಗಂಜ್ ಜಿಲ್ಲೆಯ ಭೋರೆ ತಾಲೂಕಿನ ತಿಲಕಡುಮಾರ್ ಗ್ರಾಮದಲ್ಲಿ ನಡೆದಿದೆ.
ಮಮತಾದೇವಿ ಮಕ್ಕಳಿಗೆ ವಿಷವುಣಿಸಿದ ತಾಯಿ. ದಿಗ್ವಿಜಯ್ ಕುಮಾರ್ (4), ಕುಮಾರಿ (5) ಮತ್ತು ರಣ್ವಿಜಯ್ ಕುಮಾರ್ (3) ಸಾವನ್ನಪ್ಪಿದ ಮಕ್ಕಳು. ಕೌಟುಂಬಿಕ ಕಲಹದಿಂದ ಬೇಸತ್ತ ಮಮತಾದೇವಿ ಭಾನುವಾರ ರಾತ್ರಿ ತನ್ನ ಮೂವರು ಮಕ್ಕಳಿಗೆ ವಿಷ ಮಿಶ್ರಿತ ಆಹಾರವನ್ನು ತಿನ್ನಿಸಿದ್ದಾಳೆ. ವಿಷಾಹಾರ ಸೇವಿಸಿದ ಮೂರು ಕಂದಮ್ಮಗಳು ಮನೆಯಲ್ಲಿಯೇ ಸಾವನ್ನಪ್ಪಿವೆ.
Advertisement
Advertisement
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಆರೋಪಿ ಮಮತಾದೇವಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಮತಾಳ ನೆರೆಹೊರೆ ಅವರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದ್ರೆ ಮಮತಾ ಮಾತ್ರ ತಾನೇಕೆ ಮಕ್ಕಳನ್ನು ಕೊಂದೇ ಎಂಬುದರ ಬಗ್ಗೆ ಹೇಳಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.
Advertisement
ಕೌಟುಂಬಿಕ ಕಲಹಕ್ಕೆ ಮನನೊಂದು ಮಮತಾ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಅಂತಾ ಶಂಕಿಸಲಾಗಿದೆ. ಆದರೆ ಘಟನೆಯ ಬಗ್ಗೆ ಗ್ರಾಮಸ್ಥರು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ.