ರಿಯಾದ್: ಪ್ರಯಾಣ ಮಾಡುವ ವೇಳೆ ಗಡಿಬಿಡಿಯಲ್ಲಿ ಕೆಲವೊಮ್ಮೆ ಪ್ರಯಾಣಿಕರು ಲಗೇಜ್ ಮರೆತು ಹೋಗುತ್ತಾರೆ. ಆದ್ರೆ ಮಹಿಳೆಯೊಬ್ಬರು ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಏರ್ಪೋರ್ಟ್ ನಲ್ಲಿ ಮರೆತು ಹೋದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ಹೌದು, ಜೆಡ್ಡಾದ ಕಿಂಗ್ ಅಬ್ದುಲ್ಲ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ಜರುಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತನ್ನ ಮಗುವಿನೊಂದಿಗೆ ವಿಮಾನಕ್ಕಾಗಿ ಕಾಯುತ್ತಿದ್ದ ಮಹಿಳೆ, ವಿಮಾನ ಬಂದ ಪ್ರಕಟಣೆ ಕೇಳಿದ ಕೂಡಲೇ ಮಗುವನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿದ್ದಾಳೆ. ಬಳಿಕ ವಿಮಾನ ಟೇಕಾಫ್ ಆಗಿ ಸ್ವಲ್ಪ ದೂರ ಹೋದ ಬಳಿಕ ಮಹಿಳೆಗೆ ತನ್ನ ಮಗುವಿನ ನೆನಪಾಗಿದೆ. ನಂತರ ಗಾಬರಿಯಿಂದ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿ ವಾಪಸ್ ವಿಮಾನವನ್ನು ಜೆಡ್ಡಾ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.
Advertisement
Advertisement
ಕೊನೆಗೆ ಮಹಿಳೆಯ ಮನವಿಗೆ ಮಣಿದ ಸಿಬ್ಬಂದಿ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದು, ಮಹಿಳೆ ಮಗುವನ್ನು ಕರೆದುಕೊಂದು ವಾಪಸ್ ಅದೇ ವಿಮಾನದಲ್ಲಿ ತಾನು ಹೋಗಬೇಕಿದ್ದ ಊರಿಗೆ ಪ್ರಯಾಣಿಸಿದ್ದಾರೆ.
Advertisement
ಈ ರೀತಿ ಪ್ರಕರಣ ಇದೇ ಮೊದಲ ಬಾರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಲ್ಲದೆ ಮಗುವೊಂದೇ ನಿಲ್ದಾಣದಲ್ಲಿ ತಾಯಿಗಾಗಿ ಕಾಯುತ್ತಿದ್ದ ಕಾರಣಕ್ಕೆ ವಿಮಾನವನ್ನು ವಾಪಸ್ ತಿರುಗಿಸಲಾಯಿತು ಎಂದು ಪೈಲಟ್ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv