-ಮದ್ವೆ ಬಳಿಕ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ
ಚೆನ್ನೈ: ತಾಯಿ ತನ್ನ ಪ್ರಿಯಕರನ ಜೊತೆ ಅಪ್ರಾಪ್ತ ಮಗಳ ಮದುವೆ ಮಾಡಿಸಿರುವ ಘಟನೆ ತಮಿಳುನಾಡಿನ ನಿಲಕರಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಅಪ್ರಾಪ್ತ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿ ಬಾಲಗೃಹದಲ್ಲಿ ಇರಿಸಿದ್ದಾರೆ.
ಶುಕ್ರವಾರ ರಾತ್ರಿ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಾಯದಿಂದ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
Advertisement
ಏನಿದು ಪ್ರಕರಣ?
ಬಾಲಕಿ ತನ್ನ ಪೋಷಕರೊಂದಿಗೆ ನಿಲಕರಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಳು. ಬಾಲಕಿಯ ತಂದೆ ಸಾವನ್ನಪ್ಪಿದ ಬಳಿಕ ಆಕೆಯ ತಾಯಿ ಗ್ರಾಮದ ಮುಖಂಡನಾದ ರಾಜಶೇಖರ್ (33) ಎಂಬಾತನೊಂದಿಗೆ ಅಕ್ರಮ ಸಂಬಂಧದಲ್ಲಿದ್ದಳು. ಒಂದು ದಿನ ರಾಜಶೇಖರ್ ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡು ಭವಿಷ್ಯದಲ್ಲಿ ಇಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮದುವೆ ಬಳಿಕ ನೀನು ಸಹ ನನ್ನೊಂದಿಗೆ ದೈಹಿಕ ಸಂಪರ್ಕದಲ್ಲಿ ಇರಬೇಕೆಂದು ಷರತ್ತು ವಿಧಿಸಿದ್ದಾನೆ. ರಾಜಶೇಖರ್ ಮಾತು ಕೇಳಿದ ತಾಯಿ, ಮಗಳ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದಾಳೆ. ಆದ್ರೆ ಮಗಳು ಆತನನ್ನು ಮದ್ವೆ ಆಗಲ್ಲ ಎಂದು ಹೇಳಿದ್ದಾಳೆ.
Advertisement
Advertisement
ಮಗಳು ಒಪ್ಪದೇ ಇದ್ದಾಗ ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಾಯಿಯ ಸಮ್ಮುಖದಲ್ಲಿ ಬಾಲಕಿಯ ಮದುವೆ ಮಾಡಿಸಿದ್ದಾರೆ. ಮೂರು ದಿನ ನಿರ್ಜನ ಪ್ರದೇಶದಲ್ಲಿ ಬಂಧಿಸಿದ್ದಾರೆ. ನಂತರ ಗ್ರಾಮಕ್ಕೆ ಕರೆದುಕೊಂಡು ಮನೆಯಲ್ಲಿರಿಸಿ 20 ದಿನಗಳ ಕಾಲ ಬಾಲಕಿಯ ಮೇಲೆ ಮೂವರು ಅತ್ಯಾಚಾರ ಎಸೆಗಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.
Advertisement
ಬಾಲಕಿ ಹೇಳಿದ್ದೇನು?
ಮದುವೆಗೆ ನಾನು ಒಪ್ಪಲಿಲ್ಲ. ಸಂಜೆ ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ಮೂವರು ನನ್ನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದರು. ನಂತರ ಒಂದು ಸ್ಥಳದಲ್ಲಿ ಮದುವೆಯೂ ನಡೆಯಿತು. ಮದುವೆಯಾದ ಬಳಿಕ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಅಧಿಕಾರಿಗಳಿಗೆ ಬಾಲಕಿಯೊಬ್ಬಳನ್ನು ಮನೆಯಲ್ಲಿ ಬಲವಂತವಾಗಿ ಕೂಡಿ ಹಾಕಲಾಗಿದೆ. ಬಾಲ್ಯ ವಿವಾಹ ನಡೆದಿದೆ ಎಂದು ಸಹ ಹೇಳಲಾಗುತ್ತಿದೆ. ಕಳೆದ 20 ದಿನಗಳಿಂದ ಬಾಲಕಿ ಮೂವರು ಪುರುಷರು ಮತ್ತು ಮಹಿಳೆಯೊಬ್ಬಳ ಕಣ್ಗಾವಲಿನಲ್ಲಿದ್ದಾಳೆ. ಮನೆಯಲ್ಲಿ ಬಾಲಕಿಗೆ ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಿರುವ ಹಾಗೆ ಕಾಣ್ತಿದೆ. ಆದಷ್ಟು ಬೇಗ ಬಾಲಕಿಯನ್ನು ರಕ್ಷಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗುತ್ತಿದ್ದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಬಾಲಕಿಯನ್ನು ಕಾಂಚಿಪುರಂ ನಗರದ ಬಾಲಗೃಹದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews