– ಹೋಳಿ ಹಬ್ಬಕ್ಕೆ ಬಟ್ಟೆ ಖರೀದಿಗಾಗಿ ಪತಿ-ಪತ್ನಿ ಜಗಳ
ಲಕ್ನೋ: ಪಾಪಿ ತಾಯಿಯೊಬ್ಬಳು ತನ್ನ 6 ತಿಂಗಳ ಪುಟ್ಟ ಕಂದಮ್ಮನನ್ನೇ ಹೊಡೆದು ಕೊಂದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಆಲಿಘರ್ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಭಾನುವಾರ ನಡೆದಿದೆ. ಹೊಸ ಬಟ್ಟೆ ಖರೀದಿಗಾಗಿ ಪತಿ-ಪತ್ನಿ ನಡುವೆ ಜಗಳಕ್ಕೆ ಮಗು ಬಲಿಯಾಗಿದೆ.
Advertisement
Advertisement
ಆರೋಪಿ ತಾಯಿಯನ್ನು ಪಿಂಕಿ ಶರ್ಮಾ ಎಂದು ಗುರುತಿಸಲಾಗಿದೆ. ಈಕೆ ಮತ್ತು ಪತಿ ರಾಹುಲ್ ಮಧ್ಯೆ ಹೋಳಿ ಹಬ್ಬಕ್ಕೆ ಮಕ್ಕಳಿಗೆ ಬಟ್ಟೆ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದೆ. ಮಕ್ಕಳಿಗೆ ಬಟ್ಟೆ ಕೊಡಿಸಲ್ಲ ಎಂದು ಪತಿ ಹೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಪತಿಯ ಮಾತಿನಿಂದ ಸಿಟ್ಟುಗೊಂಡ ಪಿಂಕಿ ತನ್ನ ಕೋಪವನ್ನು ಮಗಳು ಸೋನಿ ಮೇಲೆ ತೋರಿಸಿದ್ದಾಳೆ. ಸೋನಿಗೆ ಚೆನ್ನಾಗಿ ಥಳಿಸಿದ್ದಾಳೆ. ಹೀಗಾಗಿ ಪುಟ್ಟ ಕಂದಮ್ಮ ಸ್ಥಳದಲ್ಲೇ ಮೃತಪಟ್ಟಿದೆ.
Advertisement
ಪಿಂಕಿ ಶರ್ಮಾ ಹಾಗೂ ರಾಹುಲ್‍ಗೆ 4 ವರ್ಷಗಳ ಹಿಂದೆ ಮದುವೆಯಾಗಿದೆ. ರಾಹುಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ 3 ವರ್ಷದ ಮಗನಿದ್ದಾನೆ.
Advertisement
ಘಟನೆಯ ಬಳಿಕ ರಾಹುಲ್ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪತ್ನಿ ಪಿಂಕಿ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಕೊಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಪಿಂಕಿಯನ್ನು ಅರೆಸ್ಟ್ ಮಾಡಿದ್ದಾರೆ.
ಆದರೆ ಇತ್ತ ಪೊಲೀಸರ ಬಳಿ ತಾನು ಮಗುವನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲವೆಂದು ಪಿಂಕಿ ಹೇಳಿದ್ದಾಳೆ. ಆಕೆ ಪತಿ ಜೊತೆಗಿನ ವಾಗ್ವಾದದಿಂದ ವಿಚಲಿತಗೊಂಡಿದ್ದರಿಂದ ಸಿಟ್ಟನ್ನು ಮಗುವಿನ ಮೇಲೆ ತೀರಿಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.