ಕೋಲಾರ: ಹೆರಿಗೆ ಅಂತ ಬಂದ ತಾಯಿ ಹೆರಿಗೆ ನಂತರ ಹೆಣ್ಣು ಮಗುವಾಗಿದ್ದಕ್ಕೆ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಸೆಪ್ಟೆಂಬರ್ 22ರಂದು ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಕಲಿ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದ ತಾಯಿಗೆ ಈಗ ಮಗು ಬೇಡವಾಗಿದೆ. ಕೋಲಾರ ತಾಲೂಕಿನ ಆವಣಿ ಬಳಿಯ ನಕಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನ ನೀಡಿದ್ದು, ಪುಷ್ಪ ಹಾಗೂ ಸುನೀಲ್ ಎಂಬ ಹೆಸರಿನ ದಂಪತಿಗೆ ಸೇರಿದ ಹೆಣ್ಣು ಮಗು ಎನ್ನಲಾಗಿದೆ.
Advertisement
ಅವಧಿ ಮುನ್ನವೇ ಹುಟ್ಟಿರುವುದರಿಂದ ಮಗು ಕಡಿಮೆ ತೂಕವನ್ನು ಹೊಂದಿದ್ದು ಉಸಿರಾಟದ ತೊಂದರೆಯನ್ನು ಹೊಂದಿದೆ. ಸದ್ಯ ಮಗುವನ್ನು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದೀಗ ಮಗು ಚೇತರಿಕೆ ಕಂಡಿದೆ.
Advertisement
ಮಗುವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಗುವನ್ನು ದತ್ತು ಪಡೆದುಕೊಳ್ಳಲು ಸಾಕಷ್ಟು ಸಂಘ ಸಂಸ್ಥೆಗಳು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಾವಳಿಗಳಂತೆ ದತ್ತು ಪಡೆದುಕೊಳ್ಳುವರಿಂದ ಸಹಿಯನ್ನು ಪಡೆದು ನಂತರ ದತ್ತು ನೀಡುವ ಚಿಂತನೆ ನಡೆಯುತ್ತಿದೆ.
Advertisement
ಸದ್ಯ ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv