ಬೆಂಗಳೂರು: ಹೆತ್ತ ಕಂದ ಅಮ್ಮನ ಮೇಲೆ ಕೈ ಮಾಡಿದ್ರು, ಕ್ಷಮಿಸಿ ತನ್ನ ಮಗನನ್ನು ಬಂಧ ಮುಕ್ತಗೊಳಿಸಲು ತಾಯಿ ಮುಂದಾಗಿದ್ದಾರೆ.
ಅಮ್ಮನನ್ನ ಪೊರಕೆಯಲ್ಲಿ ಹೊಡೆದ ಮಗನಿಗೆ ಕ್ಷಮಾ ಬಿಕ್ಷೆ ನೀಡಲು ತಾಯಿ ನಿರ್ಧರಿಸಿದ್ದಾರೆ. ಶನಿವಾರದಂದು ಜೆ ಪಿ ನಗರದಲ್ಲಿ ತಾಯಿ ಮೇಲೆ ಪೊರಕೆಯಲ್ಲಿ ಮಗನೊಬ್ಬ ಹಲ್ಲೆ ಮಾಡಿದ್ದನು. ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಪೊರಕೆಯಿಂದ ಮಗ ಹೊಡೆದಿದ್ದನು. ಇದೀಗ ತನ್ನ ಕಂದನ ಮೇಲೆ ದೂರು ದಾಖಲಿಸಬೇಡಿ ಎಂದು ಪೊಲೀಸರ ಮೊರೆ ಹೋಗಿ ಮಗನ ಭವಿಷ್ಯ ಹಾಳಾಗುತ್ತೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.
ನಾನು ನನ್ನ ಮಗನಿಗೆ ಬುದ್ಧಿ ಹೇಳ್ತೀನಿ ಇಷ್ಟಕ್ಕೆ ಇದು ಸಾಕು, ದಯಮಾಡಿ ಅವನನ್ನ ಬಿಟ್ಟು ಬಿಡಿ ಎಂದು ಪೊಲೀಸರಿಗೆ ತಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಜೆಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಹುಡುಗನ ಅಮ್ಮ ಮನವಿ ಮಾಡಿದ್ದಕ್ಕೆ ಮಗನಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!
ಭಾನುವಾರ ರಾತ್ರಿ ಹುಡುಗನ ಮೇಲೆ ಎಫ್‍ಐಆರ್ ದಾಖಲಾಗಿದ್ದ ಹಿನ್ನೆಲೆ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹುಡುಗ ಬಾಲಾಪರಾಧಿ ಎಂದು ಪತ್ತೆಯಾದ ಬಳಿಕ ತಾಯಿ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಮಂಗಳವಾರ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹುಡುಗನನ್ನ ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv