ನವದೆಹಲಿ: 4 ವರ್ಷಗಳಿಂದ ಕೋಣೆಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಬಂಧಿಯಾಗಿದ್ದರು ಎನ್ನಲಾದ ತಾಯಿ ಮಗಳನ್ನು ದೆಹಲಿ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಇಬ್ಬರು ಇಲ್ಲಿನ ಮಹಾವೀರ್ ಎನ್‍ಕ್ಲೇವ್ ನಿವಾಸಿಗಳಾಗಿದ್ದು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. 42 ವರ್ಷದ ಕಲಾವತಿ ಮತ್ತು ಅವರ ಮಗಳಾದ 20 ವರ್ಷದ ದೀಪಾ ಮದಲನೇ ಮಹಡಿಯ ರೂಮಿನಲ್ಲಿ ಬಂಧಿಯಾಗಿದ್ದಾರೆ ಎಂದು ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅಮ್ಮ ಮಗಳನ್ನ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
Advertisement
ಮಹಿಳೆಯ ಮಾವ ಕೂಡ ಇದೇ ಮನೆಯಲ್ಲಿ ವಾಸವಾಗಿದ್ದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಹಿಳೆಯರಿದ್ದ ರೂಮಿನ ಬಾಗಿಲು ತೆರೆದೇ ಇತ್ತು. ಇಬ್ಬರೂ ಅಪೌಷ್ಟಿಕತೆಗೆ ಒಳಗಾಗಿದ್ದರು. ಅನಾರೋಗ್ಯಕರ ಸ್ಥಿಯಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಮೊದಲಿಗೆ ಪೊಲೀಸರೊಂದಿಗೆ ಆಸ್ಪತ್ರೆಗೆ ಹೋಗಲು ತಾಯಿ ಹಾಗೂ ಮಗಳು ನಿರಾಕರಿಸಿದ್ದರು. ಇಬ್ಬರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಕಲಾವತಿ ಅವರ ಮಾವ ಮಹಾವೀರ್ ಮಿಶ್ರಾ ಪಕ್ಕದ ರೂಮಿನಲ್ಲೇ ವಾಸವಿದ್ದು, ಮಹಿಳೆಯರು ಕೇಳಿದಾಗ ದಿನಕ್ಕೆ ಒಂದು ಬಾರಿ ಊಟ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
2000ದಲ್ಲಿ ಹಂಡತಿ ತೀರಿಕೊಂಡಿದ್ದು, 4 ವರ್ಷಗಳ ಹಿಂದೆ ಇಬ್ಬರು ಗಂಡು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಅಂದಿನಿಂದ ಕಲಾವತಿ ಹಾಗೂ ದೀಪಾ ರೂಮಿನೊಳಗೆ ಬಂಧಿಯಾಗಿದ್ದಾರೆ. ನನ್ನ ಮಕ್ಕಳೊಂದಿಗೆ ಮಾತನಾಡಿದೆ ಎಂದು ಇಬ್ಬರೂ ಆಗಾಗ ಹೇಳುತ್ತಿದ್ದರು. ಎಷ್ಟೋ ದಿನ ಊಟ ಕೂಡ ಮಾಡುತ್ತಿರಲಿಲ್ಲ. ಸ್ಥಳೀಯ ವೈದ್ಯರೊಬ್ಬರು ಇವರಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಬಳಿ ಹೆಚ್ಚಿನ ಹಣ ಇರಲಿಲ್ಲವಾದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ ಎಂದು ಮಹಾವೀರ್ ಮಿಶ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.