ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ (Women’s Asia Cup 2022) ಅಮ್ಮ, ಮಗಳ (Mother-Daughter) ಜೋಡಿಯೊಂದು ಕಮಾಲ್ ಮಾಡುತ್ತಿದೆ.
Advertisement
ಪಾಕಿಸ್ತಾನದ (Pakistan) ಮಹಿಳಾ ಅಂಪೈರ್ ಸಲೀಮಾ ಇಮ್ತಿಯಾಜ್ (Saleema Imtiaz), ನಿನ್ನೆ ಸಿಲ್ಹೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಮೂಲಕ ಅಂಪೈರ್ ಆಗಿ ಡೆಬ್ಯೂ ಮಾಡಿದರು. ಸಲೀಮಾ ಇಮ್ತಿಯಾಜ್ ಪಾಕಿಸ್ತಾನ ತಂಡದ ಆಲ್‍ರೌಂಡರ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ (Kainat Imtiaz) ಅವರ ತಾಯಿ. ಸದ್ಯ ಇವರಿಬ್ಬರು ಏಷ್ಯಾಕಪ್‍ನ ಭಾಗವಾಗಿದ್ದಾರೆ. ಇದನ್ನೂ ಓದಿ: IND vs SA 2nd T20I: ಟಿಕೆಟ್ ಸೋಲ್ಡ್ ಔಟ್ – ಪಂದ್ಯ ನಡೆಯೋದೆ ಡೌಟ್
Advertisement
Advertisement
ಕೈನಾತ್ ಇಮ್ತಿಯಾಜ್ ಏಷ್ಯಾಕಪ್‍ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಕೈನಾತ್ ಇಮ್ತಿಯಾಜ್ ಪಾಕಿಸ್ತಾನ ತಂಡದ ಆಟಗಾರ್ತಿಯಾಗಿ ಕಣಕ್ಕಿಳಿಯಲು ಎದುರುನೋಡುತ್ತಿದ್ದಾರೆ. ಇದನ್ನೂ ಓದಿ: ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ – ಕೊಹ್ಲಿ ಆಹ್ವಾನಿಸಿದ ಪಾಕ್ ಅಭಿಮಾನಿ
Advertisement
View this post on Instagram
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕೈನಾತ್ ಇಮ್ತಿಯಾಜ್, ನನ್ನ ತಾಯಿ ಐಸಿಸಿ (ICC) ಮಹಿಳಾ ವಿಶ್ವಕಪ್ ಪಂದ್ಯದ ಮೂಲಕ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗೆ ಇದು ತುಂಬಾ ವಿಶೇಷ ದಿನ ಅವರ ಸಾಧನೆ ತುಂಬಾ ಖುಷಿ ನೀಡಿದೆ. ನನಗೆ ಅವರು ಸ್ಪೂರ್ತಿ, ಅವರ ಕನಸಾಗಿತ್ತು ಪಾಕಿಸ್ತಾವನ್ನು ಪ್ರತಿನಿಧಿಸಬೇಕೆಂದು ಇದೀಗ ಅವರು ಅಂಪೈರ್ ಆಗಿ ಏಷ್ಯಾಕಪ್‍ನಲ್ಲಿದ್ದಾರೆ. ನನಗೆ ತುಂಬಾ ಹೆಮ್ಮೆಯಾಗಿದೆ. ಇದೀಗ ನಾವಿಬ್ಬರು ಒಂದೇ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ನನಗೆ ಮತ್ತು ಅಮ್ಮನಿಗೆ ಸದಾ ಬೆನ್ನೆಲುಬಾಗಿ ನಿಂತ ಅಪ್ಪನಿಗೆ ಧನ್ಯವಾದ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.