ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ತಾಯಿ, ಮಗಳು ಸೇರಿಕೊಂಡು 12 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಶಿವಮೊಗ್ಗದ ವಿನೋಬನಗರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ವ್ಯಕ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಶಿವಮೊಗ್ಗದ ಯುವತಿ, ತಾನು ರಾಷ್ಟ್ರೀಯ ಬ್ಯಾಂಕ್‍ವೊಂದರಲ್ಲಿ ಸಾಲ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಳು. ಅಲ್ಲದೇ ವಿನೋಬನಗರದಲ್ಲಿ ಬಂಗಲೆ, ಕಾರು ಮತ್ತು ಸಾಗರದಲ್ಲಿ ಎರಡು ಅಕ್ಕಿ ಗಿರಣಿಗಳಿವೆ ಎಂದು ಹೇಳಿಕೊಂಡಿದ್ದಳು. ಇದನ್ನೂ ಓದಿ: ವಾಯು ಮಾಲಿನ್ಯ ಹೆಚ್ಚಳದಿಂದ ಶಾಲಾ-ಕಾಲೇಜು ಬಂದ್ ಮಾಡಿದ ದೆಹಲಿ
2021ರ ಜನವರಿ 15 ರಂದು ಬೆಂಗಳೂರಿನ ಆ ವ್ಯಕ್ತಿಗೆ ಕರೆ ಮಾಡಿದ ಯುವತಿ, ತಾನು ಹುಬ್ಬಳ್ಳಿಯಲ್ಲಿದ್ದು ಪರ್ಸ್ ಕಳೆದು ಹೋಗಿದೆ. ಬ್ಯಾಂಕ್ ಖಾತೆ ಸಹ ಸ್ಥಗಿತಗೊಂಡಿದೆ. ಅಪ್ಪನಿಗೆ ಅನಾರೋಗ್ಯ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತಾಗಿ ಹಣ ಬೇಕಾಗಿದೆ ಎಂಬ ನೆಪ ಹೇಳಿ 12.40 ಲಕ್ಷ ರೂಪಾಯಿ ಪಡೆದುಕೊಂಡಿದ್ದಳು. ಹಣ ನೀಡಿದ ವ್ಯಕ್ತಿ ಕೆಲವು ದಿನಗಳ ನಂತರ ತಾನು ನೀಡಿದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಸದ್ಯಕ್ಕೆ ಹಣ ಇಲ್ಲ ಕಷ್ಟದಲ್ಲಿದ್ದೇನೆ ತನ್ನನ್ನೇ ಮದುವೆಯಾಗುವಂತೆ ದುಂಬಾಲು ಬಿದ್ದಿದ್ದಾಳೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 247 ಕೊರೊನಾ ಕೇಸ್, 1 ಸಾವು
ಹಣ ನೀಡಿದ ವ್ಯಕ್ತಿ ತೀವ್ರ ಒತ್ತಡ ಹೇರಿದಾಗ 3 ಲಕ್ಷದ 10 ಸಾವಿರ ರೂ ಹಣವನ್ನು ಯುವತಿ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾಳೆ. ಉಳಿದ 9 ಲಕ್ಷದ 30 ಸಾವಿರ ರೂ. ಹಣಕ್ಕೆ ತನ್ನ ಕಾರನ್ನು ಕೊಂಡುಕೊಳ್ಳುವಂತೆ ಹೇಳಿದ್ದಾಳೆ. ತನಗೆ ಹಣವೇ ಬೇಕು ಎಂದು ವ್ಯಕ್ತಿ ಒತ್ತಡ ಹೇರಿದಾಗ ಯುವತಿ ಹಾಗೂ ಆಕೆಯ ತಾಯಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ತಾಯಿ ಮಗಳ ವಿರುದ್ಧ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.