ನವದೆಹಲಿ: ಇಂದಿನಿಂದ ದೆಹಲಿ (Delhi) ಮತ್ತು ವಿವಿಧೆಡೆ ಮಾರುಕಟ್ಟೆಗಳಲ್ಲಿ ಕೆನೆ ಭರಿತ ಹಾಲಿಗೆ 1 ರೂ. ಮತ್ತು ಟೋಕನ್ ಹಾಲಿಗೆ 2 ರೂ. ಹೆಚ್ಚಿಸಲು ಮದರ್ ಡೈರಿ ( Mother Dairy) ನಿರ್ಧರಿಸಿದೆ.
ಲೀಟರ್‌ಗೆ 63 ರೂಪಾಯಿ ಇದ್ದ ಕೆನೆ ಭರಿತ ಹಾಲಿನ ದರ ಈಗ 64 ರೂಪಾಯಿಗೆ ಏರಿಕೆಯಾಗಿದೆ. ಆದರೂ 500 ಮಿಲಿ ಪ್ಯಾಕ್‍ಗಳಲ್ಲಿ ಮಾರಾಟವಾಗುವ ಕೆನೆ ಭರಿತ ಹಾಲಿನ ಬೆಲೆಯನ್ನು ಕಂಪನಿ ಪರಿಷ್ಕರಿಸಿಲ್ಲ. ಇನ್ನೂ ಟೋಕನ್ ಹಾಲು ಲೀಟರ್‌ಗೆ 50 ರೂ.ಯಂತೆ ಮಾರಾಟವಾಗಲಿದೆ. ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್ – CBIಗೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ
Advertisement
Advertisement
ಮದರ್ ಡೈರಿ ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಹಾಲಿನ ದರವನ್ನು ಏರಿಕೆ ಮಾಡಿದ್ದು, ಇಂದಿನಿಂದ ಈ ದರ ಜಾರಿಗೆ ಬಂದಿದೆ. ಪೂರೈಕೆ ವ್ಯತ್ಯಯ, ಉತ್ಪಾದನಾ ವೆಚ್ಚದ ಏರಿಕೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಅಭ್ಯರ್ಥಿಗಳನ್ನ ಘೋಷಣೆ ಮಾಡೋ ಹಕ್ಕು ಸಿದ್ದರಾಮಯ್ಯಗಿಲ್ಲ: ಡಿಕೆಶಿ
Advertisement
Advertisement
ಈ ವರ್ಷ ಹಾಲಿನ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಯ ಕಂಡಿದೆ. ಹಸು ಮತ್ತು ಎಮ್ಮೆಯ ಮೇವಿನ ದರ ಹೆಚ್ಚಾಗಿದ್ದು, ಪ್ರತಿಕೂಲ ಹವಾಮಾನವು ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಹಾಲಿನ ಉತ್ಪಾದನೆ ಆಗಿಲ್ಲ. ಬೇಡಿಕೆ ಮತ್ತು ಸರಬರಾಜು ಮಧ್ಯೆ ದೊಡ್ಡ ಅಂತರ ಇದೆ ಎಂದು ಭಾನುವಾರ ಹಾಲಿನ ಬೆಲೆ ಏರಿಕೆ ನಿರ್ಧಾರಕ್ಕೆ ಹಲವಾರು ಕಾರಣಗಳನ್ನು ನೀಡಿದ್ದಾರೆ.