ನವದೆಹಲಿ: ಅಮುಲ್ ಹಾಲಿನ ದರ ಏರಿಕೆ ಬೆನ್ನಲ್ಲೇ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲು ಸೇರಿದಂತೆ ವಿವಿಧ ಮಾದರಿಯ ಹಾಲಿನ ಬೆಲೆಯನ್ನು (Milk Prices) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ.
ಜೂನ್ 3ರಿಂದಲೇ (ಇಂದು) ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಇದು ಮೊದಲ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್ ಟಾಪ್ ಕಮಾಂಡರ್ಸ್
ಯಾವ ಮಾದರಿಯ ಹಾಲಿಗೆ ಎಷ್ಟು ಬೆಲೆ ಏರಿಕೆ?
ಟೋಕನ್ ಮಿಲ್ಕ್ 52 ರೂ. ನಿಂದ 54 ರೂ.ಗೆ ಹೆಚ್ಚಿಸಲಾಗಿದೆ. ಇನ್ನುಳಿದಂತೆ ಟೋನ್ಡ್ ಮಿಲ್ಕ್ (ಟೆಟ್ರಾ ಪ್ಯಾಕ್) 54 ರೂ. ನಿಂದ 56 ರೂ.ಗೆ, ಹಸುವಿನ ಹಾಲು 56 ರಿಂದ 58 ರೂ.ಗೆ, ಕೆನೆ ಹಾಲು 66 ರೂ. ನಿಂದ 68 ರೂ.ಗೆ. ಎಮ್ಮೆ ಹಾಲು 70 ರೂ. ನಿಂದ 72 ರೂ. ಹಾಗೂ ಡಬಲ್ ಟೋನ್ಡ್ ಪ್ಯಾಕೆಟ್ ಹಾಲಿನ ದರ 48 ರೂ. ನಿಂದ 50 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್ ಡೌನ್, ಹೂಡಿಕೆದಾರರ ಆಕ್ರೋಶ
ದೆಹಲಿ ಎನ್‌ಸಿಆರ್‌ನಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ತಾಜಾ ಹಾಲು ಮಾರಾಟ ಮಾಡುತ್ತಿರುವ ಮದರ್ ಡೈರಿ 2023ರ ಫೆಬ್ರವರಿಯಲ್ಲಿ ಕೊನೆಯಬಾರಿಗೆ ಹಾಲಿನ ದರವನ್ನು ಹೆಚ್ಚಿಸಿತ್ತು.
ಕಳೆದ ಕೆಲವು ತಿಂಗಳಲ್ಲಿ ಹಾಲಿನ ಸಂಗ್ರಹಣೆಗೆ ಹೆಚ್ಚಿನ ಬೆಲೆ ಪಾವತಿಸಿದ್ದರೂ ದರ ಏರಿಕೆ ಮಾಡಿರಲಿಲ್ಲ. ಇತ್ತೀಚೆಗೆ ಕೆಲವೆಡೆ ಬಿಸಿಲಿನ ತಾಪ ಏರಿಕೆಯಿಂದ ಹಾಲಿನ ಉತ್ಪಾದನೆ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಬೆಲೆ ಏರಿಕೆ ಮಾಡಿರುವುದಾಗಿ ಮದರ್ ಡೈರಿ ಹೇಳಿದೆ. ಇದನ್ನೂ ಓದಿ: Election Results – ಟ್ರೆಂಡ್ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ