ಬಾಗಲಕೋಟೆ: ಹುಟ್ಟಿದ ಮೂವರು ಮಕ್ಕಳು (Children) ಕೂಡಾ ಹೆಣ್ಣು (Female) ಎಂದು ಮನನೊಂದ ತಾಯಿ (Mother) ಜ್ಯೂಸ್ ಬಾಟಲಿಯಲ್ಲಿ (Juice Bottle) ವಿಷ (Poison) ಬೆರೆಸಿ ಮಕ್ಕಳನ್ನು ಸಾಯಿಸಿದ್ದಲ್ಲದೇ ತಾನು ಕೂಡಾ ಆತ್ಮಹತ್ಯೆ (Suicide) ಮಾಡಿಕೊಂಡ ದಾರುಣ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
Advertisement
ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದ ರೇಖಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ತನ್ನ ಮಕ್ಕಳಾದ ಶ್ರಿನಿಧಿ (2), ಸಮೃದ್ಧಿ (4) ಹಾಗೂ ಸನ್ನಿಧಿಗೆ (7) ಮಹಿಳೆ ಮೊದಲು ವಿಷ ಉಣಿಸಿ ಬಳಿಕ ತಾನೂ ವಿಷ ಸೇವಿಸಿದ್ದಾರೆ. ಮೂವರು ಮಕ್ಕಳು ಹೆಣ್ಣೇ ಹುಟ್ಟಿದ್ದರಿಂದ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಚಳಿ ಮತ್ತಷ್ಟು ಹೆಚ್ಚಳ – ಶೀತ ಮಾರುತಗಳ ಅಲರ್ಟ್
Advertisement
ಮೃತ ಮಕ್ಕಳ ಹಾಗೂ ತಾಯಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k