ಕೋಲಾರ: ಕೌಟುಂಬಿಕ ಕಲಹದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ (Kolar) ದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಹೊರ ವಲಯದಲ್ಲಿರುವ ಕೆರೆಯಲ್ಲಿ ಗುರುವಾರ ಸಂಜೆ ತಾಯಿ (Mother) ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆಕೆ ಯಾರು, ಆಕೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಕಾರಣ ಏನು ಅನ್ನೋ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಮೃತ ತಾಯಿ ಮಕ್ಕಳ ಗುರುತು ಪತ್ತೆಯಾಗಿದ್ದು, ಮೃತರನ್ನ ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಮೂಲದವರು ಎನ್ನಲಾಗಿದೆ.
Advertisement
Advertisement
ಆಂಧ್ರಪ್ರದೇಶ (Andhrapradesh) ಮೂಲದ ಸದ್ಯ ಮಾಲೂರು ತಾಲೂಕು ಚೊಕ್ಕಂಡಹಳ್ಳಿಯಲ್ಲಿ ವಾಸವಿರುವ ಬೇಬಿ (30), ದರ್ಶಿನಿ (4) ಹಾಗೂ ಛಾಯಶ್ರೀ (1) ಎನ್ನಲಾಗಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಚೊಕ್ಕಂಡಹಳ್ಳಿ ಗ್ರಾಮದ ವೇಣುಗೋಪಾಲ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇನ್ನೂ ಕಿರಿ ಮಗಳು ಛಾಯಾಶ್ರೀ ಹುಟ್ಟಿದ ಬಳಿಕ ಗಂಡ ವೇಣುಗೋಪಲ್ ಮನೆಯಿಂದ ದೂರ ಉಳಿದಿದ್ದ, ಮನೆಗೆ ಬಂದು 1 ವರ್ಷವೇ ಆಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಫುಟ್ಪಾತ್ ಮೇಲೆ ಹೆಣ್ಣು ಮಗುವಿಗೆ ಜನ್ಮ – ತಾಯಿ ನಾಪತ್ತೆ, ನವಜಾತ ಶಿಶು ಸಾವು
Advertisement
Advertisement
ಹೊಸಕೋಟೆ ಬಳಿಯ ಗ್ಯಾಸ್ ಏಜೆನ್ಸಿ (Gas Agency) ಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿರಲಿಲ್ಲ. ಪರಿಣಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬೇಬಿ ಮಕ್ಕಳೊಂದಿಗೆ ಕರೆಗೆ ಹಾರಿದ್ದಾಳೆ. ಕೌಟುಂಬಿಕ ಕಲಹ ಹಾಗೂ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಇನ್ನೂ ಮಾಲೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k