ಬೆಂಗಳೂರು: ತಾಯಿಯೊಬ್ಬಳು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಮಗುವಿಗೆ ನೇಣು ಬಿಗಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಚಂದ್ರಲೇಔಟ್‍ನಲ್ಲಿ ನಡೆದಿದೆ.
ಸಾತ್ವಿಕ್ 2 ವರ್ಷ ಹಾಗೂ ಪ್ರತಿಭಾ (28) ಆತ್ಮಹತ್ಯೆಗೆ ಶರಣಾದ ತಾಯಿ ಮಗ. ಆತ್ಮಹತ್ಯೆಗೆ ಶರಣಾದ ಮಹಿಳೆ ಪತಿ ಸಂತೋಷ್ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಮೂಲತಃ ಕಾರವಾರದವರು ಎನ್ನಲಾಗಿದೆ. ಪತಿ ಸಂತೋಷ್ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
- Advertisement 2-
- Advertisement 3-
ಮೊದಲಿಗೆ ಮಗನಿಗೆ ತಾಯಿ ಪ್ರತಿಮಾ ನೇಣು ಹಾಕಿದ್ದಾಳೆ. ಬಳಿಕ ತಾನು ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಪ್ರತಿಭಾ ಡೆತ್‍ನೋಟ್ ಬರೆದಿದ್ದು, ಸ್ಥಳದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಚಂದ್ರಲೇಔಟ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
- Advertisement 4-
ಡೆತ್ ನೋಟ್‍ನಲ್ಲಿ ಏನಿದೆ?
ಕ್ಷಮಿಸಿ.. ನನ್ನ ಸಾವಿಗೆ ನಾನೇ ಕಾರಣ. ನನ್ನ ಸಾವಿನ ಬಳಿಕ ಮಗನನ್ನ ಸಾಕುವುದಕ್ಕೆ ಗಂಡನಿಗೆ ಕಷ್ಟವಾಗುತ್ತದೆ. ಹಾಗಾಗಿ ಮಗನನ್ನು ಸಾಯಿಸಿದ್ದೇನೆ. ನನಗೆ ಬದುಕುವ ಯೋಗ್ಯತೆ ಇಲ್ಲ. ಎಂದು ಡೆತ್ ನೋಟ್ ಬರೆದಿಟ್ಟು ಪ್ರತಿಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಮಾ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಅಂತಾ ಶಂಕಿಸಲಾಗಿದೆ.
ಈ ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪತಿ ಸಂತೋಷ್‍ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.