ಚಿಕ್ಕಮಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಿ ಬೀರನಹಳ್ಳಿಯಲ್ಲಿ ನಡೆದಿದೆ.
ತಾಯಿ ಶೋಭಾ(25), ಪ್ರದೀಪ್(9) ಮತ್ತು ವಾಣಿ(4) ಮೃತರು. ಮನೆಯಲ್ಲಿಯೇ ಮೊದಲು ಶೋಭಾ ಮಕ್ಕಳಿಗೆ ನೇಣು ಹಾಕಿದ್ದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಶೋಭಾ ತಮ್ಮ ತವರು ಮನೆಯಿಂದ ಕೇಳಿ ಸುಮಾರು 10 ಸಾವಿರ ಹಣವನ್ನು ಪತಿಗೆ ಕೊಟ್ಟಿದ್ದರು. ಶೋಭಾ ಪತಿಗೆ ತವರು ಮನೆಯವರು ಕೊಟ್ಟಿದ್ದ ಹಣವನ್ನು ಹಿಂದಿರುಗಿ ಕೊಡುವಂತೆ ಹೇಳಿದ್ದಾರೆ. ಅದಕ್ಕೆ ಪತಿ ನಿಧಾನವಾಗಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ 15 ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಬುಧವಾರ ಇದೇ ವಿಚಾರವಾಗಿ ಮತ್ತೆ ಜಗಳವಾಡಿದ್ದಾರೆ. ಬಳಿಕ ಶೋಭಾ ಅವರ ಪತಿ ಮತ್ತು ಮಾವ ಹೊರಗಡೆ ಹೋಗಿದ್ದಾರೆ. ಈ ವೇಳೆ ಸಂಜೆ ಮಕ್ಕಳಿಗೆ ಮೊದಲು ನೇಣು ಹಾಕಿ ಬಳಿಕ ಶೋಭಾ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಈ ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.