ಬೆಂಗಳೂರು: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಬಿಗಿದು ಬಳಿಕ ತಾಯಿಯೂ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
34 ವರ್ಷದ ರೇಣುಕಾ, ಮಕ್ಕಳಾದ ಪಾವನಿ(10) ಹಾಗೂ ನಿಶಿತಾ (6) ಮೃತ ದುರ್ದೈವಿಗಳು. ರೇಣುಕಾ ಅವರ ಪತಿ 35 ಲಕ್ಷ ರೂ.ನಷ್ಟು ಸಾಲ ಮಾಡಿದ್ರು. ಮಕ್ಕಳಿಗಾಗಿ ಗಂಡ ಏನನ್ನೂ ಉಳಿತಾಯ ಮಾಡದ ಹಿನ್ನೆಲೆಯಲ್ಲಿ ಮನನೊಂದ ತಾಯಿ ರೇಣುಕಾ ಮಕ್ಕಳನ್ನು ಸಾಯಿಸಿ ಬಳಿಕ ಬೆಡ್ರೂಮ್ನಲ್ಲಿ ನೇಣು ಹಾಕಿಕೊಂಡಿದ್ದಾರೆ.
Advertisement
ರೇಣುಕಾ ಚಿನ್ಮಯ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡ್ತಿದ್ದರು. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.