ಬೆಂಗಳೂರು: ಇಷ್ಟು ದಿನ ಬೆಂಗಳೂರಲ್ಲಿ (Bengaluru) ರಸ್ತೆ ಗುಂಡಿಗಳಷ್ಟೇ ಜನರನ್ನು ಬಲಿ ಪಡೆಯುತ್ತಿದ್ದವು. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಆಗಿದ್ದು ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Metro Pillar) ಕುಸಿದು ತಾಯಿ, ಮಗು ಸಾವನ್ನಪ್ಪಿದ ದಾರುಣ ಘಟನೆ ನಾಗವಾರ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ 10:30ರ ವೇಳೆಗೆ ಗದಗ ಮೂಲದ ಸಿವಿಲ್ ಎಂಜಿನಿಯರ್ ಲೋಹಿತ್, ಪತ್ನಿ ಮತ್ತು ಅವಳಿ ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದರು. ಈ ವೇಳೆ ಹೆಣ್ಣೂರು ಬಳಿ ಲೋಹಿತ್ ಕುಟುಂಬವಿದ್ದ ಬೈಕ್ ಮೇಲೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಎಂದು ಕುಸಿದಿದೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2
Advertisement
Advertisement
ಘಟನೆಯಲ್ಲಿ 35 ವರ್ಷದ ತೇಜಸ್ವಿನಿ, ಎರಡೂವರೆ ವರ್ಷದ ಮಗು ವಿಹಾನ್ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಲೋಹಿತ್ ಮತ್ತು ಅವರ ಎರಡೂವರೆ ವರ್ಷದ ಮಗಳು ವಿಸ್ಮಿತಾ ಬದುಕುಳಿದಿದ್ದಾರೆ. ದುರಂತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಟ್ರೋ ತಜ್ಞರು ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
Advertisement
Advertisement
ದುರಂತ ನಡೆದ 4 ಗಂಟೆ ನಂತ್ರ ಸ್ಥಳಕ್ಕೆ ಬಂದ ಬಿಎಂಆರ್‌ಸಿಎಲ್ (BMRCL) ಎಂಡಿ ಅಂಜುಂ ಪರ್ವೇಜ್, ಐಐಎಸ್‍ಸಿಯಿಂದ ವರದಿ ಕೇಳಿದ್ದೇವೆ. ನಂತರ ನಿಖರ ಕಾರಣ ಗೊತ್ತಾಗಲಿದೆ. ಮೃತರ ಕುಟುಂಬಸ್ಥರಿಗೆ 20 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಸಿಎಂ ಬೊಮ್ಮಾಯಿ (CM Bommai) ಸಂತಾಪ ವ್ಯಕ್ತಪಡಿಸಿ 10 ಲಕ್ಷ ಪರಿಹಾರ ಪ್ರಕಟಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಮೆಟ್ರೋ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‍ಐಆರ್ ದಾಖಲಿಸಿಕೊಂಡ ಗೋವಿಂದಪುರ ಪೊಲೀಸರು ತನಿಖೆ ನಡೆಸಿದ್ದಾರೆ. ಪಿಲ್ಲರ್ ಕುಸಿಯುವ ವೇಳೆ ಅದರ ಮೇಲೆಯೇ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕುಸಿಯುವ ಸಂದರ್ಭದಲ್ಲಿ ಕೆಳಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ವಿಚಾರ ಈಗ ಬಯಲಾಗಿದೆ.
ಮೆಟ್ರೋ ಪಿಲ್ಲರ್ ದುರಂತಕ್ಕೆ ಕಾರಣಗಳೇನು?
ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳಿನ ಸ್ಟ್ರಕ್ಚರ್ ಕುಸಿತವಾಗಿದೆ. ಕಬ್ಬಿಣದ ಸರಳಿನ ಸ್ಟ್ರಕ್ಚರ್ ತೂಕ ಕನಿಷ್ಠ ಅಂದರೂ 3 ಟನ್‍ನಷ್ಟಿರುತ್ತದೆ. ಕಾಂಕ್ರೀಟ್ ತುಂಬುವ ಮುನ್ನ ಈ ಸ್ಟ್ರಕ್ಚರ್‌ಗೆ ಸಪೋರ್ಟಿಂಗ್ ಕಂಬಿ ನೀಡಬೇಕು. ಆದರೆ ಇಂದು ಕುಸಿದ ಪಿಲ್ಲರ್‌ಗೆ ಸಪೋರ್ಟಿಂಗ್ ಕಂಬಿ ನೀಡಿರಲಿಲ್ಲ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಜನನಿಬಿಡ ರಸ್ತೆಯಲ್ಲೇ ಕಾಮಗಾರಿ ನಡೆಸಲಾಗಿದೆ. ಹೈದರಾಬಾದ್ ಮೂಲದ ಎನ್‍ಸಿಸಿ ಕಂಪನಿ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k