InternationalLatest

ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಹಕ್ಕಿ: ವಿಡಿಯೋ

Advertisements

ಬೀಜಿಂಗ್: ತಾಯಿ ಹಕ್ಕಿಯೊಂದು ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಅಪರೂಪದ ದೃಶ್ಯ ಚೀನಾದಲ್ಲಿ ನಡೆದಿದೆ.

ಹಕ್ಕಿ ಟ್ರ್ಯಾಕ್ಟರ್ ನಿಲ್ಲಿಸಿದ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಡೆದಿದ್ದೇನು?
ವ್ಯಕ್ತಿ ಟ್ರ್ಯಾಕ್ಟರಿನಲ್ಲಿ ತನ್ನ ಜಮೀನಿಗೆ ಹೋಗುತ್ತಿದ್ದನು. ಈ ವೇಳೆ ದಾರಿ ಮಧ್ಯೆ ತಾಯಿ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಪ್ರಯತ್ನಿಸಿದೆ. ಹಕ್ಕಿಯನ್ನು ನೋಡಿದ ಚಾಲಕ ತಕ್ಷಣ ಟ್ರ್ಯಾಕ್ಟರ್ ನಿಲ್ಲಿಸಿ ಹಕ್ಕಿ ಬಳಿ ಬಂದಿದ್ದಾನೆ. ಬಳಿಕ ತನ್ನ ಬಳಿಯಿದ್ದ ನೀರಿನ ಬಾಟಲಿಯನ್ನು ಹಕ್ಕಿಯ ಹತ್ತಿರ ಇಟ್ಟಿದ್ದಾನೆ.

ಚಾಲಕ ಟ್ರ್ಯಾಕ್ಟರ್ ನಿಲ್ಲಿಸುವ ಮೂಲಕ ಹಕ್ಕಿ ಇನ್ನೂ ಜನಿಸದ ಮರಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಜನಿಸುವ ಮೊದಲೇ ಪ್ರೀತಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಈ ವಿಡಿಯೋವನ್ನು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‍ವರ್ಕ್ (ಸಿಟಿಜಿಎನ್) ಬುಧವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದೆ. ಅಲ್ಲದೆ ತಾಯಿ ಹಕ್ಕಿ ತನ್ನ ಮೊಟ್ಟೆಗಳನ್ನು ರಕ್ಷಿಸಲು ಟ್ರ್ಯಾಕ್ಟರ್ ನಿಲ್ಲಿಸಿದೆ ಎಂದು ಬರೆದು ಟ್ವೀಟ್ ಮಾಡಿದೆ.

ಈ ಮನಕಲಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 30 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 1,200ಕ್ಕೂ ಹೆಚ್ಚೂ ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಹಲವರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published.

Back to top button