ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

Public TV
2 Min Read
Indian Army Tral Encounter Amir Nazir Wani 1

ಶ್ರೀನಗರ: ಜಮ್ಮು ಕಾಶ್ಮೀರದ (Jammu And Kashmir) ತ್ರಾಲ್ (Tral) ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಆತನ ತಾಯಿ ಶರಣಾಗುವಂತೆ ಬೇಡಿಕೊಂಡಿದ್ದಾರೆ.

ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ ನಾಡರ್ ಮತ್ತು ತ್ರಾಲ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಮೂವರು ಜೈಶ್ ಉಗ್ರರನ್ನು ಹೊಡೆದುರುಳಿಸಿದೆ. ಈ ಎನ್‌ಕೌಂಟರ್ ಮುನ್ನ ಜೈಶ್ ಎ ಮೊಹಮ್ಮದ್ ಉಗ್ರ ಅಮೀರ್ ನಜೀರ್ (Amir Nazir Wani) ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ಆತನ ತಾಯಿ ನೀನು ಶರಣಾಗು, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ.ಇದನ್ನೂ ಓದಿ: ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

ವೈರಲ್ ಆಗಿರುವ ವಿಡಿಯೋದಲ್ಲಿ, ಉಗ್ರ ಅಮೀರ್ ನಜೀರ್ ಎಕೆ-47 ಗನ್ ಹಿಡಿದುಕೊಂಡು ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ವೇಳೆ ಮನೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ತಾಯಿ ಹಾಗೂ ಸಹೋದರಿ ಜೊತೆ ಮಾತನಾಡಿದ್ದು, ಸಹೋದರನ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ತಾಯಿ ನೀನು ಶರಣಾಗಿ, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ. ಜೊತೆಗೆ ಆತನ ಕುಟುಂಬಸ್ಥರು ಕೂಡ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಮೀರ್, ಸೇನೆ ಮುಂದೆ ಬರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್‌ಕೌಂಟರ್ ಇದಾಗಿದೆ. ಹತರಾದ ಮೂವರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜೊತೆಗೆ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಈ ವಿಡಿಯೋ ಅಲ್ಲದೇ ಉಗ್ರರು ಕಟ್ಟಡದಲ್ಲಿ ಅವಿತಿದ್ದ ಕೊನೆ ಕ್ಷಣದ ವಿಡಿಯೋ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಸೋನು ನಿಗಮ್‍ಗೆ ಬಿಗ್ ರಿಲೀಫ್ – ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

Share This Article