ಚಿತ್ರದುರ್ಗ: ಮಾಳಿಗೆ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.
ತಾಯಿ ನಾಗರತ್ನಮ್ಮ (30), ಮಕ್ಕಳಾದ ಕೋಮಲ (02), ತೀರ್ಥವರ್ಧನ(04) ಮತ್ತು ಯಶಸ್ವಿನಿ(05) ಮೃತ ದುರ್ದೈವಿಗಳು. ಚಂದ್ರಶೇಖರ್ ಹಾಗೂ ದೇವಿಕಾ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಮಜೋಗಿಹಳ್ಳಿಯಲ್ಲಿ ಬಹುತೇಕ ಜನರು ಮಾಳಿಗೆಯಲ್ಲಿ ವಾಸ ಮಾಡುತ್ತಿದ್ದಾರೆ. ಅದೇ ರೀತಿ ಚಂದ್ರಶೇಖರ್ ಕುಟುಂಬದವರು ಕೂಡ ಮಾಳಿಗೆಯಲ್ಲಿ ವಾಸಿಸುತ್ತಿದ್ದು, ಎಲ್ಲರೂ ಮಲಗಿದ್ದರು. ಆದರೆ ಪೂರ್ವಜರ ಮಾಳಿಗೆಯಾದ ಕಾರಣ ಎಲ್ಲರೂ ನಿದ್ರಾವಸ್ಥೆಯಲ್ಲಿದ್ದಾಗ ಬೆಳಗ್ಗಿನ ಜಾವ ಏಕಾಏಕಿ ಮಾಳಿಗೆ ಕುಸಿದಿದೆ. ಪರಿಣಾಮ ನಾಗರತ್ನಮ್ಮ, ಕೋಮಲ, ತೀರ್ಥವರ್ಧನ ಮತ್ತು ಯಶಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv