LatestMain PostNational

ಪಿಎಸ್‌ಸಿ ಪರೀಕ್ಷೆಯಲ್ಲಿ ಒಟ್ಟಿಗೇ ಪಾಸಾದ್ರು ತಾಯಿ, ಮಗ

ತಿರುವನಂತಪುರಂ: ಸರ್ಕಾರಿ ಉದ್ಯೋಗಕ್ಕಾಗಿ ಜನ ಎಷ್ಟೆಲ್ಲಾ ಕಷ್ಟ ಪಡಲ್ಲ? ಅದು, ಇದು ಅಂತ ಕೋಚಿಂಗ್ ಹೋದರೂ ಪಾಸಾಗೋದೇ ಕಷ್ಟ ಎನ್ನುತ್ತಾರೆ. ಇಲ್ಲೊಬ್ಬ ತಾಯಿ ಹಾಗೂ ಮಗ ಒಟ್ಟಿಗೇ ಕೋಚಿಂಗ್ ಹೋಗಿ, ಪಬ್ಲಿಕ್ ಸರ್ವಿಸ್ ಕಮಿಷನರ್(ಪಿಎಸ್‌ಸಿ) ಪರೀಕ್ಷೆ ಬರೆದು ಪಾಸಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತಾಯಿ ಮಗನ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಲಪ್ಪುರಂ ಮೂಲದ 42 ವರ್ಷದ ಬಿಂದು ಹಾಗೂ ಅವರ ಮಗ 24 ವರ್ಷದ ವಿವೇಕ್ ಒಟ್ಟಿಗೇ ಪಿಎಸ್‌ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ. ಬಿಂದು ಲೋವರ್ ಡಿವಿಜನ್ ಕ್ಲರ್ಕ್(ಎಲ್‌ಡಿಸಿ) ಪರೀಕ್ಷೆಯಲ್ಲಿ 38 ನೇ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದು, ಅವರ ಪುತ್ರ ವಿವೇಕ್ ಲಾಸ್ಟ್ ಗ್ರೇಡ್ ಸರ್ವೆಂಟ್(ಎಲ್‌ಜಿಎಸ್) ಪರೀಕ್ಷೆಯಲ್ಲಿ 92 ನೇ ರ‍್ಯಾಂಕ್‌ನೊಂದಿಗೆ ಪಾಸಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,680 ಮಂದಿಗೆ ಕೊರೊನಾ – ಐವರು ಸಾವು

ಬಿಂದು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಪ್ರೋತ್ಸಾಹ ನೀಡಲು ತಾವು ಕೂಡಾ ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು. ಇದು ಅಂತಿಮವಾಗಿ ಕೇರಳ ಪಿಎಸ್‌ಸಿ ಪರೀಕ್ಷೆಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇದೀಗ 9 ವರ್ಷಗಳ ಬಳಿಕ ಬಿಂದು ಅವರು ತಮ್ಮ ಮಗನೊಂದಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

ತಾಯಿಯೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿವೇಕ್, ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಂದೆ ಇದಕ್ಕಾಗಿ ನಮಗಿಬ್ಬರಿಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರು. ನಮ್ಮ ಶಿಕ್ಷಕರಿಂದಲೂ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ನಿಜ, ಆದರೆ ನಾವು ಒಟ್ಟಿಗೆ ತೇರ್ಗಡೆ ಹೊಂದುತ್ತೇವೆ ಎಂದು ಯಾವತ್ತೂ ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button