ಪಾಟ್ನಾ: ಮೂರು ವರ್ಷದ ಬಾಲಕಿಯನ್ನು ಆಕೆಯ ತಾಯಿ ಹಾಗೂ ಅಜ್ಜಿ ಜೀವಂತ ಸಮಾಧಿ ಮಾಡಿರುವ ಘಟನೆ ಛಾಪ್ರಾದಲ್ಲಿ ನಡೆದಿದೆ.
ಗ್ರಾಮಸ್ಥರ ನೆರವಿನಿಂದ ಪ್ರಾಣಾಪಾಯದಿಂದ ಪಾರಾದ ಬಾಲಕಿ, ತನ್ನ ತಾಯಿ ಮತ್ತು ಅಜ್ಜಿ ಆಕೆಯನ್ನು ಭೂಮಿಯಲ್ಲಿ ಹೂತು ಹಾಕಿದ್ದಾಗಿ ತಿಳಿಸಿದ್ದಾಳೆ. ಕೋಪ ಮರ್ಹಾ ನದಿಯ ದಡದಲ್ಲಿರುವ ಸ್ಮಶಾನದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಕಟ್ಟಿಗೆಗೆಂದು ಬಂದಿದ್ದ ಕೆಲ ಮಹಿಳೆಯರಿಗೆ ಮಣ್ಣು ಅಲುಗಾಡುತ್ತಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಮಣ್ಣನ್ನು ಅಗೆದು ನೋಡಿದಾಗ ಬಾಲಕಿ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಈ ಬಗ್ಗೆ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ‘ಎಣ್ಣೆ ಹಾಡಿನ’ ಹಿಂದೆ ಬಿದ್ದ ಯೋಗರಾಜ್ ಭಟ್: ಜುಲೈ 14ರಂದು ಗಾಳಿಪಟ 2 ಚಿತ್ರದ ಎಣ್ಣೆ ಹಾಡು ರಿಲೀಸ್
Advertisement
Advertisement
ಬಾಲಕಿಯನ್ನು ಲಾಲಿ ಎಂದು ಗುರುತಿಸಲಾಗಿದ್ದು, ಕಟ್ಟಿಗೆ ತರಲೆಂದು ಮಹಿಳೆಯರು ಹೋಗಿದ್ದ ಸಮಯದಲ್ಲಿಯೇ ಬಾಲಕಿಯನ್ನು ಸಮಾಧಿ ಮಾಡಿದ್ದರಿಂದ ಆಕೆಯನ್ನು ಉಳಿಸಲು ಸಾಧ್ಯವಾಯಿತು. ನೆಲದೊಳಗಿನಿಂದ ಬಾಲಕಿಯನ್ನು ಹೊರಕ್ಕೆ ತೆಗೆದು ಕುಡಿಯಲು ನೀರು ನೀಡಲಾಯಿತು. ಈ ವೇಳೆ ಬಾಲಕಿ ಗಾಯಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಪಾ ಎಸ್‍ಎಚ್‍ಒ ಎಎಸ್‍ಐ ರವೀಂದರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!
Advertisement
Advertisement
ಲಾಲಿ ತನ್ನ ತಂದೆ ರಾಜು ಶರ್ಮಾ ಮತ್ತು ತಾಯಿ ರೇಖಾ ದೇವಿ ಎಂದು ಹೇಳಿದ್ದಾಳೆ. ನನ್ನ ತಾಯಿ ಮತ್ತು ಅಜ್ಜಿ ನನ್ನನ್ನು ಸುತ್ತಾಡಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಬಂದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಈ ವೇಳೆ ಕಿರುಚಾಡಲು ಆರಂಭಿಸಿದಾಗ ನನ್ನ ಬಾಯಿಗೆ ಮಣ್ಣು ತುರುಕಿದರು ಎಂದು ಅಳಲು ತೋಡಿಕೊಂಡಳು. ಇದೀಗ ತನಿಖೆ ಆರಂಭಿಸಿರುವ ಪೊಲೀಸರು ಬಾಲಕಿಯ ಕುಟುಂಬಸ್ಥರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.