Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒತ್ತುವರಿ ತೆರವು ಕಾರ್ಯದ ವೇಳೆ ತಾಯಿ, ಮಗಳು ಬೆಂಕಿಗಾಹುತಿ- ಕೊಲೆ ಪ್ರಕರಣ ದಾಖಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಒತ್ತುವರಿ ತೆರವು ಕಾರ್ಯದ ವೇಳೆ ತಾಯಿ, ಮಗಳು ಬೆಂಕಿಗಾಹುತಿ- ಕೊಲೆ ಪ್ರಕರಣ ದಾಖಲು

Crime

ಒತ್ತುವರಿ ತೆರವು ಕಾರ್ಯದ ವೇಳೆ ತಾಯಿ, ಮಗಳು ಬೆಂಕಿಗಾಹುತಿ- ಕೊಲೆ ಪ್ರಕರಣ ದಾಖಲು

Public TV
Last updated: February 14, 2023 11:39 am
Public TV
Share
2 Min Read
Uttar Pradesh Demolition Drive anti encroachment
SHARE

ಲಕ್ನೋ: ಒತ್ತುವರಿ ತೆರವು ಕಾರ್ಯದ (Anti Encroachment) ವೇಳೆ ಬೆಂಕಿ (Fire) ಹೊತ್ತಿಕೊಂಡು, ತಾಯಿ ಹಾಗೂ ಮಗಳು (Mother and Daughter) ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ನಡೆದಿದೆ.

ವರದಿಗಳ ಪ್ರಕಾರ, ಒತ್ತುವರಿ ತೆರವು ಕಾರ್ಯದ ವೇಳೆ 45 ವರ್ಷದ ಮಹಿಳೆ ಹಾಗೂ ಆಕೆಯ 20 ವರ್ಷದ ಮಗಳು ಬೆಂಕಿ ಹಚ್ಚಿಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ತಾಯಿ ಹಾಗೂ ಮಗಳು ಮನೆಯ ಒಳಗಿದ್ದಾಗಲೇ ಅವರ ಗುಡಿಸಲಿಗೆ ಪೊಲೀಸರು ಬೆಂಕಿ ಹಚ್ಚಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.

Uttar Pradesh Demolition Drive anti encroachment 1

ಘಟನೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು 13 ಜನರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಸ್ಟೇಷನ್ ಹೌಸ್ ಆಫೀಸರ್ ಹಾಗೂ ಬುಲ್ಡೋಜರ್‌ನ ಚಾಲಕನೂ ಸೇರಿದ್ದಾರೆ.

ಘಟನೆಯೇನು?: ಜಿಲ್ಲೆಯ ರೂರಾ ಪ್ರದೇಶದ ಮದೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರು, ಜಿಲ್ಲಾಡಳಿತ ಹಾಗೂ ಕಂದಾಯ ಅಧಿಕಾರಿಗಳು ಸರ್ಕಾರಿ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು ಬೆಳಗ್ಗೆ ಬುಲ್ಡೋಜರ್‌ನೊಂದಿಗೆ ಸ್ಥಳಕ್ಕೆ ತೆರಳಿದ್ದು, ಈ ಬಗ್ಗೆ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಜನರು ತಮ್ಮ ಗುಡಿಸಲಿನಲ್ಲಿ ಇದ್ದಾಗಲೇ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹಾಗೂ ದೇವಾಲಯಗಳನ್ನು ಒಡೆದಿದ್ದಾರೆ. ಎಲ್ಲರೂ ಅಲ್ಲಿಂದ ಪ್ರಾಣವನ್ನು ಕಾಪಾಡಲು ಓಡಿದ್ದಾರೆ. ಆದರೆ ತಾಯಿ ಹಾಗೂ ಮಗಳನ್ನು ಕಾಪಾಡಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಪ್ರತಿಸ್ಪರ್ಧಿಯೇ ಇಲ್ಲ: ಅಮಿತ್‌ ಶಾ

anti encroachment Uttar Pradesh

ಮಹಿಳೆ ಪ್ರಮಿಳ ದೀಕ್ಷಿತ್ ಹಾಗೂ ಅವರ ಮಗಳು ನೇಹಾ ಒತ್ತುವರಿ ತೆರವು ಕಾರ್ಯದ ವೇಳೆ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆದರೆ ಈ ಸಾವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಯಿ ಮಗಳ ಸಾವಿನ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

ವಿಷಯ ಬೆಳಕಿಗೆ ಬರುತ್ತಲೇ ಕಾನ್ಪುರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಸಿಂಗ್, ವಿಭಾಗೀಯ ಆಯುಕ್ತ ರಾಜ್ ಶೇಖರ್ ತಮ್ಮ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದು, ಸ್ಥಳೀಯರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದ್ದು, ಘಟನೆಯಲ್ಲಿ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ, ನಾವು ಸಂತ್ರಸ್ತ ಕುಟುಂಬದೊಂದಿಗೆ ಇದ್ದೇವೆ, ಘಟನೆಯ ಹೊಣೆಗಾರರನ್ನು ಬಿಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 4 ವರ್ಷ: ಆ ಒಂದು ಕರಾಳ ದಿನದಲ್ಲಿ ನಡೆದಿದ್ದೇನು?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:anti encroachmentdaughterfiremotheruttar pradeshಉತ್ತರ ಪ್ರದೇಶಒತ್ತುವರಿ ತೆರವು ಕಾರ್ಯತಾಯಿಬೆಂಕಿಮಗಳು
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

ಸಾಂದರ್ಭಿಕ ಚಿತ್ರ
Bagalkot

ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಏ.9 ರಂದು ಉಪಚುನಾವಣೆ -ಮೇ 4ಕ್ಕೆ ಫಲಿತಾಂಶ

Public TV
By Public TV
1 minute ago
election evm vote
Latest

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Public TV
By Public TV
12 minutes ago
rajya sabha election bjp attempts to operation kamalaa two odisha people detained
Districts

ಬಿಡದಿ ರೆಸಾರ್ಟ್‌ನಲ್ಲಿ ಒಡಿಶಾ ಕಾಂಗ್ರೆಸ್‌ ಶಾಸಕರ ಆಪರೇಷನ್‌ಗೆ ಬಿಜೆಪಿ ಯತ್ನ – ಚೆಕ್‌ ಸಮೇತ ಇಬ್ಬರು ವಶ

Public TV
By Public TV
49 minutes ago
channarayapatna bcm hostel manager commits suicide
Crime

ಚನ್ನರಾಯಪಟ್ಟಣ | ಬಿಸಿಎಂ ಹಾಸ್ಟೆಲ್ ಮ್ಯಾನೇಜರ್ ನೇಣಿಗೆ ಶರಣು – ಕಾರಣ ನಿಗೂಢ

Public TV
By Public TV
50 minutes ago
Ramesha Bandisiddegowda
Districts

ಶ್ರೀಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ – ರಮೇಶ್ ಬಂಡಿಸಿದ್ದೇಗೌಡ

Public TV
By Public TV
1 hour ago
Ramesha Bandisiddegowda
Karnataka

ಶ್ರೀಗಳ ಹೆಜ್ಜೆ ಎಲ್ಲೆಲ್ಲೋ ದಾರಿ ತಪ್ಪುತ್ತಿದೆ: ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?