ಬೆಂಗಳೂರು: ಮಗಳಿಗೆ 37 ವರ್ಷವಾದ್ದರೂ ಮದುವೆಯಾಗಿಲ್ಲ ಎಂದು ತಾಯಿ – ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.
ಸಾವಿತ್ರಮ್ಮ (67) ಮಂಜುಳಾ (37) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸಾವಿತ್ರಮ್ಮ ಹಾಗೂ ಮಂಜುಳಾ ಮೂಲತಃ ಮಂಡ್ಯದವರಾಗಿದ್ದು, ಕೆಲ ವರ್ಷಗಳಿಂದ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಮಂಜುಳಾಗೆ 37 ವರ್ಷಗಳಾದ್ದರೂ ಮದುವೆ ಆಗಿರಲಿಲ್ಲ.
Advertisement
Advertisement
ಮನೆಯ ಹೊರಗಡೆ ಎಲ್ಲೂ ಸಾವಿತ್ರಮ್ಮ ಹಾಗೂ ಮಂಜುಳಾ ಕಾಣಿಸಿಕೊಳ್ಳದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಾವಿತ್ರಮ್ಮ ಮನೆಗೆ ಬಂದು ಪರಿಶೀಲಿಸಿದ್ದಾಗ ಮೂರು ದಿನದ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Advertisement
ಸಾವಿತ್ರಮ್ಮನ ಗಂಡ ಸಾವನ್ನಪ್ಪಿದ್ದು, ಮಗ ಕೂಡ ಮದುವೆಯಾಗಿ ತನ್ನ ಪತ್ನಿಯ ಜೊತೆ ಪ್ರತ್ಯೇಕವಾಗಿ ಕೆಂಗೇರಿಯಲ್ಲಿ ವಾಸವಾಗಿದ್ದನು. ಮಗಳಿಗೆ ಮದುವೆಯಾಗಿಲ್ಲದ ವಿಚಾರವನ್ನು ಸಾವಿತ್ರಮ್ಮ ಹತ್ತಿರದ ಮನೆಯವರಲ್ಲಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಈ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.