- ಪತಿಗೆ ಕರೆ ಮಾಡಿ ನೇಣಿಗೆ ಶರಣಾದ ಮಹಿಳೆ
ಬೆಂಗಳೂರು: ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ತಾಯಿಯೊಬ್ಬಳು ತನ್ನ ಗಂಡನಿಗೆ ಕರೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹೇಳಿ ನೇಣಿಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್ (Whitefield) ಪೊಲೀಸ್ ಠಾಣಾ ವ್ಯಾಪ್ತಿಯ ನಾಗಗೊಂಡನಹಳ್ಳಿಯಲ್ಲಿ ನಡೆದಿದೆ.
ನನ್ನ ಸಾವಿಗೆ ನಾನೇ ಕಾರಣ ಅಂತ ಡೆತ್ ನೋಟ್ ಬರೆದ ಶ್ರೀಜಾ ರೆಡ್ಡಿ (24) ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಆತ್ಮಹತ್ಯೆ ನೋಡಿ ಪತಿಗೆ ಫೋನ್ ಮಾಡಿದ್ದ ತಾಯಿ ರಕ್ಷಿತಾ (48) ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನಗೂ ಬದುಕಲು ಇಷ್ಟವಿಲ್ಲ ಎಂದು ಕರೆ ಕಟ್ ಮಾಡಿ, ಮಗಳ ಮೃತದೇಹವವನ್ನು ಕೆಳಗಿಳಿಸಿ ಅದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪಿದ್ದಾರೆ. ಇದನ್ನೂ ಓದಿ: ಅಸ್ಸಾಂ ಯುವತಿ ಫೋಟೋ ಮಾರ್ಫ್ – ಸೆಕ್ಸ್ ಚಿತ್ರೋದ್ಯಮಕ್ಕೆ ಎಂಟ್ರಿಯಾಗಿರೋದಾಗಿ ಪ್ರಚಾರ ಮಾಡ್ತಿದ್ದ ಭಗ್ನ ಪ್ರೇಮಿ ಅರೆಸ್ಟ್
ಇವರು ಆಂದ್ರಪ್ರದೇಶ (Andhra Pradesh) ಮೂಲದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಶ್ರೀಜಾ ರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕೆಲಸ ನಿರ್ವಹಿಸ್ತಿದ್ದಳು. ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಿನಿ ಟ್ರಕ್ ಮೇಲೆ ಉರುಳಿ ಬಿದ್ದ ಮಾವು ತುಂಬಿದ್ದ ಲಾರಿ – 9 ಮಂದಿ ಸಾವು, 11 ಜನರಿಗೆ ಗಾಯ