ಚಾಮರಾಜನಗರ: ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಆಗ ತಾನೇ ಜನಿಸಿದ ಮಗುವನ್ನು ತನ್ನ ತಾಯಿಯೊಂದಿಗೆ ನೆಲದ ಮೇಲೆ ಮಲಗಿಸಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆಯ ಜಯಲಕ್ಷ್ಮಿ ಅವರಿಗೆ ಹೆರಿಗೆ ಆಗಿ ಕೆಲ ನಿಮಿಷಗಳಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ನೆಲದ ಮೇಲೆ ಮಲಗಿಸಿದ್ದಾರೆ. ನೆಲದ ಮೇಲೆ ಚಾಪೆ ಹಾಸಿ ಬಾಣಂತಿ ಹಾಗೂ ಎಳೆ ಕಂದಮ್ಮನನ್ನು ಮಲಗಿಸಲಾಗಿದೆ. ಈ ವೇಳೆ ಬಾಣಂತಿಯ ಪೋಷಕರು ತಮ್ಮ ಮನೆಯಿಂದ ತಂದಿದ್ದ ಬೆಟ್ ಶೀಟನ್ನು ತಾಯಿ-ಮಗುವಿಗೆ ಹೊದಿಕೆಯ ರೂಪದಲ್ಲಿ ಹಾಕಿದ್ದಾರೆ.
Advertisement
Advertisement
ಆಸ್ಪತ್ರೆಯ ಸಿಬ್ಬಂದಿ ಬಾಣಂತಿ ಹಾಗೂ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಾಪೆಯ ಮೇಲೆ ಹಾಸಿಗೆ ಹಾಸಿಕೊಡುವ ಸೌಜನ್ಯಕ್ಕೂ ಮುಂದಾಗಿಲ್ಲ. ಹೀಗಾಗಿ ಬಾಣಂತಿ ಹಾಗೂ ಮಗು ಚಳಿಯಲ್ಲಿ ನಡುಗುತ್ತಿದ್ದಾರೆ. ಹಿಂದುಳಿದ ವರ್ಗ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಸ್ವಕೇತ್ರವಾದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿತ್ಯ ಇದೇ ರೀತಿ ಒಂದಲ್ಲಾ ಒಂದು ಸಮಸ್ಯೆಗಳಿಂದ ಇಲ್ಲಿನ ಜನರು ಬಳಲುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv