ಚೆನ್ನೈ: 10 ತಿಂಗಳ ಮಗುವನ್ನು ಆಂಧ್ರಪ್ರದೇಶದ ದಂಪತಿಗೆ 3 ಲಕ್ಷ ರೂ. ಗೆ ಮಾರಾಟ ಮಾಡಿರುವ ಪ್ರಕರಣ ಸಂಬಂಧ ತಾಯಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
Advertisement
ಕನ್ನಗಿ ನಗರದ ವಿಜಯಲಕ್ಷ್ಮಿ (30) ಮತ್ತು ಆಕೆಯ ಪತಿ ಚಿಂದೂರೈ (35) ಬಡತನದ ಕಾರಣದಿಂದ ತಮ್ಮ ಹತ್ತು ತಿಂಗಳ ಹಸುಳೆ ಮುತ್ತುರಾಜ್ ನನ್ನು ಮಾರಾಟ ಮಾಡಿದ್ದಾರೆ. ದಂಪತಿ ತಮ್ಮ ಮಗುವನ್ನು ಮಹಿಳಾ ಬ್ರೋಕರ್ ಒಬ್ಬರ ಮೂಲಕ ಆಂಧ್ರ ಪ್ರದೇಶದ ದಂಪತಿಗೆ 85,000 ರೂ. ಗೆ ನೀಡಲು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ
Advertisement
ನಂತರ ದಂಪತಿ ಬ್ರೋಕರ್‌ಗೆ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ಮೊದಲಿಗೆ ಬ್ರೋಕರ್, ದಂಪತಿಯ ಬೇಡಿಕೆಗೆ ಒಪ್ಪಿರಲಿಲ್ಲ. ನಂತರ ಅವಳು ಅವರ ಬೇಡಿಕೆಗೆ ಒಪ್ಪಿಕೊಂಡಿದ್ದು, ರೆಡ್ ಹಿಲ್ಸ್‌ನ ನವನೀತಮ್ ಮತ್ತು ಪಾಂಡುರಂಗನ್ ಎಂಬ ದಂಪತಿಗೆ 3 ಲಕ್ಷ ರೂ. ಗೆ ಮಗುವನ್ನು ಮಾರಾಟ ಮಾಡಿದ್ದಾಳೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ
Advertisement
Advertisement
ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಲಲಿತಾ ಅವರಿಗೆ ಶಿಶು ಮಾರಾಟದ ಬಗ್ಗೆ ತಿಳಿದಿದ್ದು, ಲಲಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.