ಅಗರ್ತಲಾ: 53 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ಪುತ್ರಿಯವರೊಂದಿಗೆ ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ (ಟಿಬಿಎಸ್‍ಇ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಶಿಲಾ ರಾಣಿ ದಾಸ್ ತಮ್ಮ ಇಬ್ಬರು ಪುತ್ರಿಯರೊಂದಿಗೆ 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು. ಬುಧವಾರ ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಿಸಿದ್ದು, ತಮ್ಮ ಇಬ್ಬರು ಪುತ್ರಿಯರೊಂದಿಗೆ ಶಿಲಾ ರಾಣಿ ದಾಸ್ ಉತ್ತೀರ್ಣರಾಗಿದ್ದಾರೆ. ಇದನ್ನೂ ಓದಿ: ಅರ್ಜುನ್ ಪಾತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ : ಇದು ಬೆಂಗಳೂರು ಬಾಯ್ಸ್ ಲುಕ್
Advertisement
Advertisement
ಚಿಕ್ಕ ವಯಸ್ಸಿನಲ್ಲಿಯೇ ಶಿಲಾ ದಾಸ್ ಮದುವೆಯಾದರು. ಆದರೆ ದುರದೃಷ್ಟವಶಾತ್ ಅವರ ಪತಿ ಬೇಗ ನಿಧನರಾದರು. ಇದರಿಂದ ಶಿಲಾ ದಾಸ್ ಅವರಿಗೆ ಓದಲು ಸಾಧ್ಯವಾಗಲಿಲ್ಲ ಮತ್ತು ತಮ್ಮ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಿದರು. ಹಲವು ವರ್ಷಗಳ ಬಳಿಕ ಇಬ್ಬರು ಪುತ್ರಿಯರು ತಮ್ಮ ತಾಯಿಗೆ 10ನೇ ತರಗತಿ ಪರೀಕ್ಷೆ ಬರೆಯುವಂತೆ ಒತ್ತಾಯಿಸಿದರು. ಹೀಗಾಗಿ ತಮ್ಮ ಮಕ್ಕಳ ಮಾರ್ಗದರ್ಶನದ ಮೇರೆಗೆ ಪರೀಕ್ಷೆಗೆ ಸಿದ್ಧತೆ ನಡೆಸಿದರು.
Advertisement
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪರೀಕ್ಷೆಯಲ್ಲಿ ಪಾಸ್ ಆಗಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಪರೀಕ್ಷೆ ಬರೆಯಲು ನನ್ನ ಮಕ್ಕಳು ನನಗೆ ಬೆಂಬಲ ಮತ್ತು ಸ್ಫೂರ್ತಿ ನೀಡಿದರು. ಅಲ್ಲದೇ ನನಗೆ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂಬ ವಿಶ್ವಾಸವಿತ್ತು ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮಾಡ್ತಿರೋದು ಡಿಕೆ ಶಿವಕುಮಾರ್ ವಿರುದ್ಧ ಹಾಗಾಗಿ ಡಿಕೆಶಿಗೆ ನಿದ್ದೆ ಇಲ್ಲ: ನಳಿನ್ ಕುಮಾರ್ ಕಟೀಲ್
Advertisement
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಶಿಲಾ ರಾಣಿ ದಾಸ್ ಅವರ ಪುತ್ರಿ ಜಯಶ್ರೀ ಅವರು, ನಮ್ಮ ತಾಯಿ, ನಾನು ಹಾಗೂ ನನ್ನ ಸಹೋದರಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಮುಂದೆ ನಾವು 12ನೇ ತರಗತಿ ಪರೀಕ್ಷೆ ಬರೆದು ತೇರ್ಗಡೆಯಾಗುತ್ತೇವೆ. 12ನೇ ತರಗತಿ ಪರೀಕ್ಷೆ ಬರೆಯಲು ಸಹ ನಮ್ಮ ತಾಯಿಗೆ ಬೆಂಬಲ ನೀಡುವುದರ ಜೊತೆಗೆ ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.