ಬೆಂಗಳೂರು: ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಬೆಲೆ ಇಳಿಕೆ ಕಂಡಿದ್ದು, ಮೇ 7ರ ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸೋಣ ಎಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಚಿನ್ನದ ಬದಲು ಮನೆಯ ಪೂಜಾ ಕೋಣೆಯಲ್ಲಿ ನೀರು ಇಟ್ಟು ಪೂಜೆ ಸಲ್ಲಿಸಿ ಎಂದು ಸಲಹೆ ನೀಡಿದ್ದಾರೆ.
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ವಜ್ರ ಖರೀದಿ ಮಾಡೋದು ಅಲ್ಲ. ಚಿನ್ನ-ಬೆಳ್ಳಿಗಿಂತ ನೀರು ಜೀವನಕ್ಕೆ ಮುಖ್ಯ. ಅಕ್ಷಯ ತೃತೀಯ ದಿನ ಪೂಜಾ ಮನೆಯಲ್ಲಿ ನೀರು ಇಟ್ಟು ಸಂವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 31 ಸಾವಿರ ರೂ. ಇದ್ರೆ. ಇವತ್ತು ಬೆಂಗಳೂರಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 32,350 ರೂಪಾಯಿ, 22 ಕ್ಯಾರೆಟ್‍ನ ಚಿನ್ನದ ಬೆಲೆ 29,950 ರೂಪಾಯಿ. 1 ಕೆಜಿ ಬೆಳ್ಳಿ 40,500 ರೂಪಾಯಿ ಆಗಿದೆ. ಅಂತರಾಷ್ಟೀಯ ಮಟ್ಟದಲ್ಲಿ ಚಿನ್ನದ ದರ ಕಡಿಮೆ ಆಗಿರೋದೇ ಚಿನ್ನದ ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರು ಈಗಲೇ ಬುಕ್ ಮಾಡೋದು ಬೆಸ್ಟ್ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಿದ್ದಾರೆ.