– ಕೋತಿ ಹಿಡಿಯಲು ಘೋಷಿಸಲಾಗಿತ್ತು 21 ಸಾವಿರ ರೂ. ಬಹುಮಾನ
ಭೋಪಾಲ್: 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿಯನ್ನು (Monkey) ಕೊನೆಗೂ ಸೆರೆಹಿಡಿಯಲಾಗಿದೆ. ಕೋತಿಯನ್ನು ಹಿಡಿದವರಿಗೆ 21 ಸಾವಿರ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ (Bhopal) ರಾಜಗಢದಲ್ಲಿ (Rajgarh) 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಕೋತಿಯೊಂದು ಸ್ಥಳೀಯರ ನಿದ್ದೆಗೆಡಿಸಿತ್ತು. ಕೋತಿಯ ಉಪಟಳ ತಾಳಲಾರದೆ ಅದನ್ನು ಸರೆಹಿಡಿಯಲು ಹರಸಾಹಸ ಪಡಲಾಗಿತ್ತು. ಮೋಸ್ಟ್ ವಾಂಟೆಡ್ ಎನಿಸಿಕೊಂಡಿದ್ದ ಕೋತಿಯನ್ನು ಸೆರೆಹಿಡಿದವರಿಗೆ ಬರೋಬ್ಬರಿ 21 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಘೋಷಿಸಲಾಗಿತ್ತು. ಇದನ್ನೂ ಓದಿ: ತಮ್ಮ ಸಾಲ ಮಾಡಿದ್ದಕ್ಕೆ ಅಣ್ಣ ಕಿಡ್ನ್ಯಾಪ್; ಸಿನಿಮಾ ಸ್ಟೈಲಲ್ಲಿ ತಮಿಳು ರ‍್ಯಾಪರ್ ದೇವ್ ಆನಂದ್ ಅಪಹರಣ
ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಉಜ್ಜಯಿನಿಯಿಂದ ತಂಡವನ್ನು ಕರೆಸಿ, ಡ್ರೋನ್ ಮೂಲಕ ಕೋತಿಯನ್ನು ಪತ್ತೆ ಹಚ್ಚಿ, ಅದಕ್ಕೆ ಅರಿವಳಿಕೆ ನೀಡಿ ಕೊನೆಗೂ ಅದನ್ನು ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ವಾಹನಕ್ಕೆ ಕೊಂಡೊಯ್ಯುತ್ತಿದ್ದಂತೆ ಅಲ್ಲಿದ್ದ ಗುಂಪು ‘ಜೈ ಶ್ರೀರಾಮ್, ಜೈ ಬಜರಂಗಬಲಿ’ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ
ಭಾರೀ ದಾಂಧಲೆ ನಡೆಸಿದ್ದ ಕೋತಿ ಕಳೆದ 15 ದಿನಗಳಲ್ಲಿ 8 ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನರ ಮೇಲೆ ಗಂಭೀರ ದಾಳಿ ನಡೆಸಿತ್ತು.