ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಕ್ವಿಂಟನ್ ಡಿ ಕಾಕ್ (Quinton de Kock) ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು ಹೊರಹೊಮ್ಮಿದ್ದು, ವಿಶ್ವಕಪ್ ಇತಿಹಾಸದಲ್ಲಿ ಅಗ್ರ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿಯಲು 129 ರನ್‌ಗಳಷ್ಟೇ ಬಾಕಿ ಇದೆ.
ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದು (ಬುಧವಾರ) ನಡೆದ ಪಂದ್ಯದಲ್ಲಿ ಆಫ್ರಿಕಾ (South Africa) ಪರ ಕ್ವಿಂಟನ್ ಡಿ ಕಾಕ್ ಶತಕ ಸಿಡಿಸಿ ಮಿಂಚಿದರು. ಆ ಮೂಲಕ ಐಸಿಸಿ ವಿಶ್ವಕಪ್ 2023 ರಲ್ಲಿ 500 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಆಸೀಸ್‌ಗೆ ಆಘಾತ – ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಔಟ್
Advertisement
Advertisement
ಪಂದ್ಯದ ಆರಂಭಕ್ಕೂ ಮುನ್ನ ಡಿ ಕಾಕ್‌ಗೆ 500 ರನ್‌ಗಳನ್ನು ಪೂರೈಸಲು 69 ರನ್‌ಗಳ ಅಗತ್ಯವಿತ್ತು. ಅವರು ನ್ಯೂಜಿಲೆಂಡ್ ವಿರುದ್ಧ 114 ರನ್ ಬಾರಿಸಿದರು. ಆ ಮೂಲಕ ಈ ಪಂದ್ಯಾವಳಿಯ 7 ಪಂದ್ಯಗಳಲ್ಲಿ 545 ರನ್ ಗಳಿಸಿದ್ದಾರೆ.
Advertisement
30ರ ಹರೆಯದ ಅವರು ವಿಶ್ವಕಪ್ ಆವೃತ್ತಿಯಲ್ಲಿ 500 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2007 ರ ವಿಶ್ವಕಪ್‌ನಲ್ಲಿ ಜಾಕ್ವೆಸ್ ಕಾಲಿಸ್ ಅವರ 485 ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್ ಮಾಡಿದ್ದೇಕೆ?
Advertisement
ಸಚಿನ್ ದಾಖಲೆ ಉಡೀಸ್‌ಗೆ ಬೇಕು 128 ರನ್
ಐಸಿಸಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಐದು ಆಟಗಾರರು 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2003ರ ವಿಶ್ವಕಪ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (Sachin Tendulkar) 673 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, 2007ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 659 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ದಾಖಲೆ ಮುರಿಯಲು ಡಿ ಕಾಕ್‌ಗೆ 129 ರನ್‌ಗಳಷ್ಟೇ ಬಾಕಿ ಇದೆ.
Web Stories