ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ಬಿಜೆಪಿ ನಾಯಕರು (BJP Leaders) ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಆದ್ರೆ ನಮ್ಮ ಅವಧಿಗಿಂತ ಬಿಜೆಪಿ ಆಡಳಿತದಲ್ಲಿಯೇ ಅತೀಹೆಚ್ಚು ಕೊಲೆಯಾಗಿದೆ ಅಂತ ಬಿಜೆಪಿ ಆಡಳಿತದಲ್ಲಿ ಆಗಿರುವ ಅಪರಾಧಗಳ ಮಾಹಿತಿಯನ್ನು ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ಫೋನ್ ಟ್ಯಾಪ್ ಮಾಡಲು ಅವರೇನು ಭಯೋತ್ಪಾದಕರೇ – ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಕೋಮುಗಲಭೆ ಆಗಿಲ್ಲ. ಆದರೆ ಅವರ ಕಾಲದಲ್ಲಿ ಒಟ್ಟು 466 ಕೊಲೆಗಳಾಗಿವೆ. ನಮ್ಮ ಕಾಲದಲ್ಲಿ 430 ಕೊಲೆಗಳಾಗಿವೆ. 2021 ಜನವರಿಯಿಂದ ಏಪ್ರಿಲ್ ವರೆಗೆ 449 ಕೊಲೆಗಳಾಗಿವೆ. 2022 ಜನವರಿಯಿಂದ ಏಪ್ರಿಲ್ ವರೆಗೆ 466 ಕೊಲೆಗಳು ನಡೆದಿವೆ. 2023ರ ಮೊದಲ 4 ತಿಂಗಳ ಅವಧಿಯಲ್ಲಿ 431 ಮತ್ತು 2024ರ ಮೊದಲ 4 ತಿಂಗಳ ಅವಧಿಯಲ್ಲಿ ಕೊಲೆಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವರುಷ ಒಂದು ಸಮಸ್ಯೆಗಳು ನೂರೊಂದು – ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನ ವಜಾಗೊಳಿಸಲಿ: ಆರ್.ಅಶೋಕ್
Advertisement
Advertisement
ಬಿಜೆಪಿಗರು ಬರೀ ರಾಜಕೀಯ ಉದ್ದೇಶಕ್ಕೆ:
ಕಾನೂನು ಸುವ್ಯವಸ್ಥೆ (Law System) ಹಾಳಾಗಿದೆ ಅಂತಾರೆ. ವಿಪರ್ಯಾಸವೆಂದರೆ ಅವರ ಕಾಲದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ನಡೆದಿವೆ ಎಂದು ವಾಗ್ದಾಳಿ ನಡೆದಿದ್ದಾರೆ. ಇದನ್ನೂ ಓದಿ: 2014 ರಿಂದ 2022ರವರೆಗೂ ಆಪ್‌ಗೆ ವಿದೇಶದಿಂದ ಫಂಡಿಂಗ್ – ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ