ಕಲಬುರಗಿ: ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತವರಿನಲ್ಲಿಯೇ ಅತೀ ಹೆಚ್ಚು ನವಜಾತ ಶಿಶು ಮತ್ತು ತಾಯಿಯ ಮರಣ ಮುಂದುವರೆದಿದೆ.
ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯಲ್ಲಿಯೇ 287 ನವಜಾತ ಶಿಶುಗಳು ಮರಣ ಹೊಂದಿವೆ. 20 ಮಹಿಳೆಯರು ಹೆರಿಗೆ ಸಮಯದಲ್ಲಿಯೇ ಮೃತಪಟ್ಟಿದ್ದಾರೆ. ಖುದ್ದು ಆರೋಗ್ಯ ಇಲಾಖೆಯೇ ಈ ಅಂಕಿ ಅಂಶ ನೀಡಿದ್ದು ಜನರಲ್ಲಿ ತೀವ್ರ ಬೇಸರ ತರಿಸಿದೆ.
Advertisement
Advertisement
ಕಲಬುರಗಿ ಜಿಲ್ಲೆಯ ಮರಣಮೃದಂಗ ಇತಿಹಾಸ ತೆಗೆದ್ರೆ ವರ್ಷವಾರು ಮೃತಪಟ್ಟ ಶಿಶುಗಳ ವಿವರ ಇಂತಿದೆ:
> 2012-13ರಲ್ಲಿ 847 ಶಿಶುಗಳ ಮರಣ
> 2013-14ರಲ್ಲಿ 815 ಶಿಶುಗಳ ಮರಣ
> 2014-15ರಲ್ಲಿ 59 ಶಿಶುಗಳು ಸಾವು
> 2016-17 287 ಕಂದಮ್ಮಗಳು ಬಲಿ
Advertisement
Advertisement
ಗರ್ಭಿಣಿಯರ ಸಾವು:
> 2012-13ರಲ್ಲಿ 57 ತಾಯಂದಿರ ಮರಣ
> 2013-14ರಲ್ಲಿ 37 ತಾಯಂದಿರ ಮರಣ
> 2014-15ರಲ್ಲಿ 47 ತಾಯಂದಿರ ಸಾವು
2012-13ರಲ್ಲಿ 847 ನವಜಾತ ಶಿಶುಗಳು ಸಾವನಪ್ಪಿವೆ. 2013-14ರಲ್ಲಿ 815 ನವಜಾತ ಮಕ್ಕಳು ಜೀವಬಿಟ್ಟಿವೆ. 2014-15ರಲ್ಲಿ 59 ಮಕ್ಕಳು ಅಸುನೀಗಿವೆ. 2017ನೇ ಏಪ್ರಿಲ್‍ನಿಂದ ಜುಲೈ ಅಂತ್ಯದವರೆಗೆ 287 ಶಿಶುಗಳು ಸಾವನಪ್ಪಿರುವದು ಅಘಾತಕಾರಿ. ಇನ್ನು 2012-13ರಲ್ಲಿ 57 ತಾಯಿಂದಿರು ಮರಣವನ್ನಪ್ಪಿದ್ರೆ, 2013-14ರಲ್ಲಿ 37, 2015 ಮಾರ್ಚ್ ಅಂತ್ಯದವರೆಗೆ 47 ತಾಯಂದಿರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಕೇಳಿದ್ರೆ ಹೆರಿಗೆ ಸಮಯದಲ್ಲಿನ ಸಾವು ತಡೆಯಲು ಇಲಾಖೆ ಸಿದ್ಧವಿದೆ. ಆದ್ರೆ ಬಹುತೇಕ ಹೆರಿಗೆ ಪ್ರಕರಣಗಳಲ್ಲಿ ಸಕಾಲದಲ್ಲಿ ಚಿಕಿತ್ಸೆಗೆ ಬರ್ತಿಲ್ಲ ಅಂತಾರೆ.