ಟೆಹ್ರಾನ್: ಇರಾನ್‌ನಲ್ಲಿರುವ (Iran) ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಆದರೆ ಕೆಲ ವಿದ್ಯಾರ್ಥಿಗಳು ಅಲ್ಲೇ ಉಳಿಯಲು ಇಚ್ಛಿಸಿದರು ಎಂದು ಇರಾನ್‌ನಲ್ಲಿರುವ ಭಾರತ ರಾಯಭಾರ (Indian Embassy) ಕಚೇರಿ ಮಾಹಿತಿ ನೀಡಿದೆ.
ಭಾರತೀಯ ರಾಯಭಾರ ಕಚೇರಿಯು, ಇರಾನ್ ಮತ್ತು ಇಸ್ರೇಲ್ ಯುದ್ಧದಿಂದಾಗಿ ಮಂಗಳವಾರ (ಮಾ.3) ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್ (Tehran) ನಗರದ ಹೊರಗಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಹಾಗೂ ಅವರ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಮಾ.3ರಂದು ಹೊರಡಿಸಿದ ಸೂಚನೆಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಸಮಯದಲ್ಲಿ ಕೆಲ ವಿದ್ಯಾರ್ಥಿಗಳು ಇಲ್ಲಿಯೇ ಉಳಿಯಲು ಇಚ್ಛಿಸಿದರು ಎಂದು ತಿಳಿಸಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಕಚೇರಿ ಮೇಲೆ ದಾಳಿ – ಐಆರ್‌ಜಿಸಿ, ಹೆಜ್ಬುಲ್ಲಾ ಕಮಾಂಡರ್‌ಗಳು ಫಿನಿಶ್
ಭಾರತ ರಾಯಭಾರ ಕಚೇರಿಯು ಟೆಹ್ರಾನ್‌ನಲ್ಲಿರಲು ಬಯಸುವ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದು, ಆದಷ್ಟು ಮನೆಯಿಂದ ಹೊರಬರಬೇಡಿ, ಕಿಟಕಿಯಿಂದ ದೂರವಿರಿ. ಎಲ್ಲ ಸಮಯದಲ್ಲಿಯೂ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದೆ.

