ರಿಯಾದ್: ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ದುಬಾರಿ ಬೆಲೆಯ ಒಂಟೆಯನ್ನು ಖರೀದಿ ಮಾಡಿದ್ದಾರೆ. ಈ ಒಂಟೆಯೂ 7 ಮಿಲಿಯನ್ ಅಂದರೆ ಸುಮಾರು 14.23 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಒಂಟೆಯ ವಿಶೇಷತೆ: ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ವಿಶೇಷ ಸೌಂದರ್ಯವನ್ನು ಹೊಂದಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.
Advertisement
— مقاطع فيديو (@Yoyahegazy1) March 25, 2022
ಸೌದಿ ಅರೇಬಿಯಾದಲ್ಲಿ ಈ ಒಂಟೆಗಾಗಿ ಸಾರ್ವಜನಿಕ ಹರಾಜು ಆಯೋಜಿಸಲಾಗಿತ್ತು. ಹರಾಜಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ, ಒಂಟೆಯನ್ನು ಚೌಕಾಕಾರದ ಕಬ್ಬಿಣದ ಮಧ್ಯೆ ಇರಿಸಿರುವುದನ್ನು ನೀವು ನೋಡಬಹುದು. ಇದನ್ನೂ ಓದಿ: ನಾವು ಪರಿಶುದ್ಧವಾಗಿದ್ದಾಗ ಯಾರು ಏನು ಮಾಡೋದಕ್ಕೆ ಆಗೋದಿಲ್ಲ: ಹೆಚ್‍ಡಿಕೆ
Advertisement
ಒಂಟೆಯ ಆರಂಭಿಕ ಬಿಡ್ (5 ಮಿಲಿಯನ್ ರಿಯಾದ್) ಸುಮಾರು 10.16 ಕೋಟಿ ರೂಪಾಯಿ ಆಗಿದೆ. ನಂತರ ಒಂಟೆ 14.23 ಕೋಟಿ (7 ಮಿಲಿಯನ್ ಸೌದಿ ರಿಯಾಲ್‍ಗಳಲ್ಲಿ)ಗೆ ಹರಾಜು ಹಾಕಲಾಗಿದೆ. ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರ ಗುರುತು ಬಹಿರಂಗವಾಗಿಲ್ಲ. ಆದರೆ ಈ ದುಬಾರಿ ಬೆಲೆಯ ಒಂಟೆ ಮಾತ್ರ ಸಖತ್ ಸುದ್ದಿಯಾಗುತ್ತಲಿದೆ.