ವೆಸ್ಟ್ ಇಂಡೀಸ್: ತನ್ನ ಆಕ್ರಮಣಕಾರಿ ಬ್ಯಾಟಿಂಗ್‍ನಿಂದಲೇ ಹೆಸರು ವಾಸಿಯಾಗಿರುವ ಕ್ರಿಸ್ ಗೇಲ್ ಟಿ20 ಯಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಕೆಟ್ಟ ದಾಖಲೆಯನ್ನು ಸಹ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Advertisement
ಕ್ರಿಸ್ ಗೇಲ್ ಬ್ಯಾಟಿಂಗ್ ಬಂದರೆ ಎದುರಾಳಿ ಬೌಲರ್ ಗಳು ನಡುಗುತ್ತಾರೆ. ಟಿ20 ಯಲ್ಲಿ ಅತಿ ಹೆಚ್ಚು ರನ್ ಬಾರಿಸುವ ಗೇಲ್ ಈಗ ಹೆಚ್ಚು ಬಾರಿ ಶೂನ್ಯಕ್ಕೆ ಬಲಿಯಾಗಿರುವ ಆಟಗಾರ ಎಂಬ ಕುಖ್ಯಾತಿಗೂ ಪಾತ್ರವಾಗಿದ್ದಾರೆ. ಕ್ರಿಕೆಟ್ ಪಂದ್ಯಗಳಲ್ಲಿ ಅಬ್ಬರಿಸುವ ಗೇಲ್ ಇದುವರೆಗೂ ಒಟ್ಟು 446 ಟಿ20 ಪಂದ್ಯಗಳನ್ನು ಆಡಿ 30 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಲ್ಲದೆ ಟಿ20ಯಲ್ಲಿ 175 ರನ್ ಹೊಡೆಯುವ ಮೂಲಕ ವೈಯಕ್ತಿಕವಾಗಿ ಅತಿಹೆಚ್ಚು ಸ್ಕೋರ್ ಗಳಿಸಿದ್ದಾರೆ. ಇದನ್ನೂ ಓದಿ: 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ
Advertisement
Advertisement
ಶೂನ್ಯಕ್ಕೆ ಔಟಾಗಿರುವವರ ಪಟ್ಟಿಯನ್ನು ನೋಡುವುದಾದರೆ ಎರಡನೇ ಸ್ಥಾನದಲ್ಲಿ 373 ಪಂದ್ಯಗಳನ್ನಾಡಿರುವ ಸುನಿಲ್ ನರೈನ್ ಇದ್ದು 28 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಅಬ್ಬರದ ಹೊಡೆತಗಳಿಗೆ ಹೆಸರಾಗಿರುವ ಲೆಂಡ್ಲೆ ಸಿಮನ್ಸ್ 283 ಪಂದ್ಯಗಳಲ್ಲಿ 28 ಬಾರಿ ರನ್ ಗಳಿಸದೆ ವಿಕೆಟ್ ಒಪ್ಪಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್ಸಿಬಿ ಬೌಲರ್ಸ್
Advertisement
ನಾಲ್ಕನೇ ಸ್ಥಾನದಲ್ಲಿ 337 ಪಂದ್ಯಗಳನ್ನಾಡಿರುವ ಡ್ವೈನೆ ಸ್ಮಿತ್ 28 ಬಾರಿ ಸೊನ್ನೆಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿರುವ ಉಮರ್ ಅಕ್ಮಲ್ 27 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಚುಟುಕು ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸಿ ದಾಖಲೆ ಬರೆದಿರುವ ವೆಸ್ಟ್ ಇಂಡೀಸ್ ಆಟಗಾರರು ಶೂನ್ಯಕ್ಕೆ ಔಟ್ ಆಗಿರುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.