ಮೈಸೂರು: ಖಾಕಿಗಳನ್ನು ಕಂಡರೆ ದುಷ್ಟರು ಹೆದರುತ್ತಾರೆ. ದುಷ್ಟರ ಪಾಲಿಗೆ ಯಾವತ್ತು ಖಾಕಿಗಳು ದುಸ್ವಪ್ನ. ಇಂತಹ ಖಾಕಿಗಳು ಸಂಜೆಯಾದರೆ ಸಾಕು ಪೊಲೀಸ್ ಠಾಣೆಯಲ್ಲೇ ಕುಳಿತುಕೊಳ್ಳಲು ಬೆಚ್ಚುತ್ತಾರೆ. ಅವು ಒಳಗೆ ಸೇರಿಕೊಂಡರೆ ಹೇಗಪ್ಪಾ ಎಂದು ತಮ್ಮ ಸುತ್ತಲೂ ಹೊಗೆ ಹಾಕಿಕೊಳ್ಳುತ್ತಾರೆ.
ಅಂದಹಾಗೆ ಪೊಲೀಸರು ಹೆದರುತ್ತಿರುವುದು ಯಾವುದಕ್ಕೆ ಅಂದುಕೊಂಡಿದ್ದೀರ? ನರ ಮಾನವವಿಗೂ ಅಲ್ಲ ದೆವ್ವ ಭೂತಕ್ಕೂ ಅಲ್ಲ. ಪೊಲೀಸರು ಹೆದರುತ್ತಿರುವುದು ಸೊಳ್ಳೆಗಳಿಗೆ. ಈ ಪರಿಸ್ಥಿತಿ ಇರೋದು ಸಿಎಂ ತವರೂರು ಮೈಸೂರಿನಲ್ಲಿ. ಹೇಳಿ ಕೇಳಿ ಮೈಸೂರಿನಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ, ಮಲೇರಿಯಾ ಭೀತಿ ಇದೆ.
Advertisement
Advertisement
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳು ಮುತ್ತಿಕೊಳ್ಳುತ್ತವೆ. ಸೊಳ್ಳೆ ಕಾಟದಿಂದ ರಕ್ಷಿಸಿಕೊಳ್ಳಲು ಠಾಣೆಯ ಪೊಲೀಸರು ಪ್ರತಿನಿತ್ಯ ಸಂಜೆ ಠಾಣೆಗೆ ಬೇವಿನ ಸೊಪ್ಪಿನ ಹೊಗೆ ಹಾಕುತ್ತಿದ್ದಾರೆ. ಪೊಲೀಸ್ ಠಾಣೆಯ ಸುತ್ತಮುತ್ತಲು ಬೆಳೆದಿರುವ ಗಿಡಗಂಟಿಗಳಿಂದ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ.
Advertisement
Advertisement
ಈ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ರೂ ಪಾಲಿಕೆ ಸಿಬ್ಬಂದಿ ಸ್ಪಂದಿಸಿಲ್ಲ. ಪ್ರತಿನಿತ್ಯ ಅವರಿಗೆ ಹೇಳಿ ಸುಸ್ತಾಗಿರುವ ಪೊಲೀಸ್ ಸಿಬ್ಬಂದಿ ಇದೀಗ ತಾವೇ ಸ್ವತಃ ಬೇವಿನ ಸೊಪ್ಪಿನ ಹೊಗೆ ಹಾಕಿಕೊಂಡು ಸೊಳ್ಳೆಗಳಿಂದ ರಕ್ಷಸಿಕೊಳ್ಳಲು ಮುಂದಾಗಿದ್ದಾರೆ.