ಚಿಕ್ಕಮಗಳೂರು: ಧರ್ಮದಂಗಲ್ ವೇಳೆ ಮುಸ್ಲಿಮ್ ಸಮುದಾಯ ಮಸೀದಿ ಮುಂದೆ ಹಿಂದೂಗಳ ಕುಂಭಾಭಿಷೇಕಕ್ಕೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕಿ ಸಮಾನತೆ ಸಾರಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಧರ್ಮ ಯುದ್ಧದ ಕಹಳೆ ಕೂಗು ಜೋರಾಗಿದೆ. ಶ್ರೇಷ್ಠ ಹಾಗೂ ಸಮಾನತೆ ಪಾಠದ ಮಧ್ಯೆ ಸಾವು-ನೋವು ಕೂಡ ಸಂಭವಿಸುತ್ತಿದೆ. ಕಳೆದ ಎರಡು ತಿಂಗಳಿಂದಲೂ ಕೂಡ ಕರ್ನಾಟಕದ ಪರಿಸ್ಥಿತಿ ಬೂದಿ ಮುಚ್ವಿದ ಕೆಂಡದಂತಿರೋದು ಸತ್ಯ.
Advertisement
Advertisement
ಹಿಜಬ್ ವಿವಾದ, ಜಟ್ಕಾ-ಹಲಾಲ್ ಕಟ್ ಸಂಘರ್ಷ ಹಾಗೂ ನೇಮ್ ಬೋರ್ಡ್ ವಿವಾದದಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಇಂತಹ ಧರ್ಮಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಸಮಾನತೆಯನ್ನು ಮೆರೆದಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
Advertisement
ಕಳೆದೊಂದು ವಾರದಿಂದ ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಮಠದಲ್ಲಿ ಆದಿ ಶಂಕರಾಚಾರ್ಯರ ಮಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿಯಿಂದ ಮಸೀದಿ ಮುಂದೆ ಫ್ಲೆಕ್ಸ್ ಹಾಕಿ ಕುಂಭಾಭಿಷೇಕಕ್ಕೆ ಶುಭ ಕೋರಿದ್ದಾರೆ.
Advertisement
ಫ್ಲೆಕ್ಸ್‌ನಲ್ಲಿ ಹರಿಹರಪುರ ಮಠದ ಸ್ವಾಮೀಜಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಗಳ ಫೋಟೋ ಹಾಕಿ, ಆ ಫ್ಲೆಕ್ಸ್‌ನ ಮಸೀದಿ ಕಾಂಪೌಂಡ್ ಮೇಲೆ ಹಾಕಿ ಕುಂಭಾಭಿಷೇಕಕ್ಕೆ ಶುಭಹಾರೈಸಿದ್ದಾರೆ. ಮುಸ್ಲಿಮರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮುಸ್ಲಿಮರಲ್ಲೂ ಒಳ್ಳೆಯವರಿದ್ದು, ಸಮಾನತೆ ಸಾರುವವರು ಇದ್ದಾರೆ ಎಂದು ಸ್ಥಳಿಯರು ಮುಸ್ಲಿಮ್ ಸಮುದಾಯದ ಬಗ್ಗೆ ಸಂತಸ ತೋರಿದ್ದಾರೆ. ಇದನ್ನೂ ಓದಿ: ದಾಖಲೆಗಳಿದ್ರೆ ಇವತ್ತೆ ಬಿಡುಗಡೆ ಮಾಡಬೇಕು – ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲ್