Connect with us

Bengaluru City

ಬೆಳಗ್ಗೆ ಐಎಎಸ್ ಅಧಿಕಾರಿಯ ಕಾರ್ ಚಾಲಕ, ಸಂಜೆ ಕಳ್ಳರ ಜೊತೆ ಚೈನ್ ಸ್ನ್ಯಾಚಿಂಗ್

Published

on

ಬೆಂಗಳೂರು: ಆ ವ್ಯಕ್ತಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ ಕೆಲಸದ ಜೊತೆಗೆ ಪಾರ್ಟ್ ಟೈಂ ಕೆಲಸ ಕೂಡ ಮಾಡುತ್ತಿದ. ಅಷ್ಟಕ್ಕೂ ಅವನು ಮಾಡುತ್ತಿದ ಕೆಲಸವಾದರು ಏನು ಅಂತ ಕೇಳಿದ್ರೆ ಅಚ್ಚರಿಯಾಗ್ತೀರ.

ಬೆಂಗಳೂರಿನ ಕೆಂಗೇರಿ ಮೂಲದ ಆ ವ್ಯಕ್ತಿಯೇ ನೋಡಿ ಈ ಇಂಟರಸ್ಟಿಂಗ್ ಸ್ಟೋರಿಯ ಕಥಾನಾಯಕ. ಹೆಸರು ಪೊರೋಷತ್ತಮ್ ಅಂತ. ಈತ ನಿವೃತ್ತ ಅಧಿಕಾರಿಯೊಬ್ಬರ ಮನೆಯಲ್ಲಿ ಕಾರು ಚಾಲಕನಾಗಿದ್ದ. ಬೆಳಗ್ಗೆ ಎದ್ದು ಸಿರಿಯಸ್ ಆಗಿ ಆ ಅಧಿಕಾರಿಯ ಕಾರು ಚಾಲಕನಾಗಿದ್ದ ಪೊರುಷೋತ್ತಮ್ ಡ್ಯೂಟಿ ಮುಗಿಯುತ್ತಿದ್ದಂತೆ ಸ್ನೇಹಿತರಾದ ಪ್ರದೀಪ್, ಪ್ರಜ್ವಲ್ ಜೊತೆ ಸೇರಿ ಫೀಲ್ಡ್  ಗೆ ಇಳಿಯುತ್ತಿದ್ದ. ಒಂಟಿಯಾಗಿ ಓಡಾಡೋ ವೃದ್ಧರು, ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡ ಚೈನ್ ಸ್ನ್ಯಾಚಿಂಗ್ ಮಾಡಿ ಎಸ್ಕೇಪ್ ಆಗುತ್ತಿದ್ದರು.

ಕೆಲ ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಈ ಮೂವರು ಸೇರಿ ಮಾರುತಿ ರಿಟ್ಜ್ ಕಾರಲ್ಲಿ ಬಂದು ಸರಗಳವು ಮಾಡಿ ಎಸ್ಕೇಪ್ ಆಗಿದ್ದರು. ಆ ವೇಳೆ ಘಟನಾ ಸ್ಥಳದ ಸಿಸಿಟಿವಿಯಲ್ಲಿ ಕಾರಿನ ನಂಬರ್ ಅಸ್ಪಸ್ಟವಾಗಿ ಕಾಣಿಸಿತ್ತು. ಕಾರಿನ ಬೆನ್ನು ಬಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿಗಳಾದ ಪುರುಷೋತ್ತಮ್, ಪ್ರದೀಪ್ ಮತ್ತು ಪ್ರಜ್ವಲ್ ನನ್ನು ಅರೆಸ್ಟ್ ಮಾಡಿದ್ದಾರೆ.

ಈ ಮೂವರ ಬಂಧನದಿಂದ ನಗರದ ದಕ್ಷಿಣ ಭಾಗದ 9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಮಾಡಿದ್ದ 18 ಪ್ರಕರಣಗಳು ಪತ್ತೆಯಾಗಿವೆ. ಕೃತ್ಯಕ್ಕೆ ಬಳಸಿದ್ದ ಕಾರು, ಪಲ್ಸರ್ ಬೈಕ್ ಸೇರಿದಂತೆ 700 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಪುರುಷೋತ್ತಮನ ಪಾರ್ಟ್ ಟೈಂ ಕೆಲಸದ ಬಗ್ಗೆ ತಿಳಿದ ಆ ಐಎಎಸ್ ಅಧಿಕಾರಿ ಶಾಕ್ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *