ಹೊಸಕೋಟೆ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಬಂಧಿಸಲಾಗಿದೆ.
ಆಂಧ್ರದ ಮದನಪಲ್ಲಿ ಮೂಲದ ಪಾಪಣ್ಣ ಅಲಿಯಾಸ್ ರೆಡ್ಡಿ 400ಕ್ಕೂ ಹೆಚ್ಚು ಜನರಿಗೆ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಸೂಲಿಬಲೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ 30 ತಿಂಗಳು ಹಣ ಕಟ್ಟಿದವರಿಗೆ 10 ಸಾವಿರ ಸೇರಿಸಿ 70 ಸಾವಿರ ನೀಡುವುದಾಗಿ ಹಬ್ಬಿಸಿದ್ದ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಮಾಜಿ ಪ್ರೇಮಿಯನ್ನ ಕೊಂದ ಪಿಎಚ್‍ಡಿ ವಿದ್ಯಾರ್ಥಿನಿ
Advertisement
Advertisement
ಅದರಂತೆ ಕೆಲವರಿಗೆ ಹಣ ನೀಡಿ ನಂಬಿಕೆ ಗಳಿಸಿಕೊಂಡು ಹೆಚ್ಚು ಜನ ಚಿಟ್ ಫಂಡ್ ಗೆ ಸೇರುವಂತೆ ಮಾಡಿದ್ದಾನೆ. ನಂತರ ಕಳೆದ 2 ತಿಂಗಳ ಹಿಂದೆ ತನ್ನ ಕಚೇರಿಗೆ ಬೀಗ ಜಡಿದು ರಾತ್ರೋ ರಾತ್ರಿ ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ ಸಂಗ್ರಹಿಸಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
Advertisement
Advertisement
ಒಟ್ಟು ಹಣ ಸುಮಾರು ಆರೇಳು ಕೋಟಿ ಎನ್ನಲಾಗಿದ್ದು, ಹಣ ಕಟ್ಟಿದ್ದವರು ಸೂಲಿಬೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಆರೋಪಿಯನ್ನು ಬಂಧಿಸಿ ಹಣ ಕೊಡಿಸುವಂತೆ ಕೋರಿದ್ದರು. ಸೋಮಶೇಖರ್ ನೀಡಿದ್ದ ದೂರಿನ ಮೇರೆಗೆ ಪಾಪಣ್ಣನನ್ನು ಮದನಪಳ್ಳಿಯಲ್ಲಿ ಪೊಲೀಸರು ಬಂಧಿಸಿ ಸೂಲಿಬೆಲೆಗೆ ಕರೆತರಲಾಗಿದೆ. ಇದನ್ನೂ ಓದಿ: ಸೇವಾ ಭಾರತಿ ಟ್ರಸ್ಟ್ನಿಂದ ಕಿಮ್ಸ್ಗೆ ಆಂಬುಲೆನ್ಸ್ ಹಸ್ತಾಂತರ
ಈತನ ವ್ಯವಹಾರಕ್ಕೆ ಪಾಪಣ್ಣನ ಪತ್ನಿ ಶ್ರೀವಲ್ಲಿ ಸಹ ಸಾತ್ ನೀಡಿದ್ದಳು ಎನ್ನಲಾಗಿದೆ. ಇದೀಗ ಪಾಪಣ್ಣ ಬಂಧನದ ಹಿನ್ನೆಲೆ ದುಡ್ಡು ಕಳೆದುಕೊಂಡಿದ್ದ, ನೂರಾರು ಜನ ಸೂಲಿಬೆಲೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.