-ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆಯಾಗಬೇಕಿದ್ದ ಕಾಂಡೋಮ್ ಬಾಕ್ಸ್
ಯಾದಗಿರಿ: ಕೇಂದ್ರ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ವಿತರಣೆಯಾಗಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಕಾಂಡೋಮ್ ಬಾಕ್ಸ್‌ಗಳು (Condom Box) ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಸಮೀಪದಲ್ಲಿ ನಡೆದಿದೆ.
Advertisement
ನೂರಾರು ನಿರೋಧ್ (ಕಾಂಡೋಮ್) ಬಾಕ್ಸ್‌ಗಳು ಖಾನಾಪುರ ಸಮೀಪದ ಇಬ್ರಾಹಿಂಪುರ ಕ್ರಾಸ್ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳೇ (Health Officers) ಬೇಕಾಬಿಟ್ಟಿಯಾಗಿ ರಸ್ತೆ ಬದಿ ಇಳಿಸಿ ಹೋದ್ರಾ ಅನ್ನೋ ಸಂಶಯವೂ ವ್ಯಕ್ತವಾಗಿದೆ. ಇದನ್ನೂ ಓದಿ: ಕುವೆಂಪು ಘೋಷವಾಕ್ಯ ತೆಗೆದುಹಾಕಲು ಸರ್ಕಾರ ಆದೇಶಿಸಿಲ್ಲ: ಸಚಿವ ಮಹದೇವಪ್ಪ
Advertisement
Advertisement
ಬಾಕ್ಸ್‌ಗಳಲ್ಲಿ ತುಂಬಿದ ಕಾಂಡೋಮ್ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಆಗಬೇಕಿತ್ತು. 2026ರ ವರೆಗೆ ಅವಧಿ ಇರೋದು ಬಾಕ್ಸ್ ಮೇಲೆ ನಮೂದಾಗಿದೆ. ಆದ್ರೆ ಏಕಾಏಕಿ ಇಷ್ಟೊಂದು ಬಾಕ್ಸ್‌ಗಳನ್ನ ರಸ್ತೆ ಮಧ್ಯೆ ಇಳಿಸಿ ಹೋಗಿದ್ದು ಯಾರು ಅನ್ನೋದು ಪತ್ತೆಯಾಗಿಲ್ಲ.
Advertisement
ಇಷ್ಟೊಂದು ಬಾಕ್ಸ್‌ಗಳು ಎಲ್ಲಿಂದ ತಂದಿದ್ದು? ಯಾವ ಆಸ್ಪತ್ರೆಗಳಿಗೆ ವಿತರಣೆಯಾಗಬೇಕು ಅನ್ನೋದರ ಬಗ್ಗೆ ಇನ್ನಷ್ಟೇ ತನಿಖೆಯಾಗಬೇಕಿದೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ