ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು ಮತಾಂತರ ಆದವ್ರು – ಬಿಹಾರ ಸಚಿವ

Public TV
1 Min Read
Ashok Chowdhary

ಪಾಟ್ನಾ: ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು (Indian Muslims) ಮತಾಂತರ ಆಗಿರುವವರು ಎಂದು ಜೆಡಿಯು (JDU) ಪಕ್ಷದ ಸಚಿವ ಅಶೋಕ್‌ ಚೌಧರಿ (Ashok Chowdhary) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಳಂದ ಜಿಲ್ಲಾ ಕೇಂದ್ರ ಬಿಹಾರ ಷರೀಫ್‌ನಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಹೆಸರಿನಲ್ಲಿ ನಡೆಸುತ್ತಿದ್ದ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ದಲಿತರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಈಗ ಭಾರತದಲ್ಲಿರುವ ಮುಸ್ಲಿಮರಲ್ಲಿ ಶೇ.90 ರಷ್ಟು ಮಂದಿ ಮತಾಂತರ ಆಗಿರುವವರೇ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಅಂತ್ಯಗೊಳಿಸಲು ಚಿಂತಿಸುತ್ತಿದ್ದೇವೆ- ಸಿಜೆಐ

Muslims in India

ಬಿಜೆಪಿ ಯಾವಾಗಲೂ ಹಿಂದೂ-ಮುಸ್ಲಿಂ ಬಗ್ಗೆ ಏನಾದರೂ ಹೇಳುತ್ತದೆ. ಎಲ್ಲಾ ವಿಚಾರದಲ್ಲೂ ಹಿಂದೂ-ಮುಸ್ಲಿಂ ಕೋನವನ್ನು ಹುಡುಕುತ್ತದೆ. ಮುಸ್ಲಿಮರು ಯಾರು? ಅವರು ಲಂಡನ್, ಅಮೆರಿಕ ಅಥವಾ ಅಫ್ಘಾನಿಸ್ತಾನದಿಂದ ಬಂದವರಲ್ಲ. ತೊಂಬತ್ತರಷ್ಟು ಮುಸಲ್ಮಾನರು ನಂತರ ಮತಾಂತರಗೊಂಡಿದ್ದರು. ಅವರು ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ಬೇಸತ್ತಿದ್ದರು ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಹಾರ ಸರ್ಕಾರವು ಶುಕ್ರವಾರ ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳ ಕರ್ತವ್ಯ ಸಮಯವನ್ನು ಬದಲಾಯಿಸಲು ಸುತ್ತೋಲೆ ಹೊರಡಿಸಿದೆ. ಮುಸ್ಲಿಂ ನೌಕರರು ಮತ್ತು ಅಧಿಕಾರಿಗಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ರಂಜಾನ್ ತಿಂಗಳಲ್ಲಿ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಕಚೇರಿಗೆ ಬರಲು ಮತ್ತು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಕಚೇರಿ ಬಿಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಪ್ರತಿಕ್ರಿಯಿಸುವಾಗ ಸಚಿವರು ಹೇಳಿಕೆ ನೀಡಿದರು. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

Share This Article
Leave a Comment

Leave a Reply

Your email address will not be published. Required fields are marked *