ಚಿಕ್ಕಬಳ್ಳಾಪುರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಮೂರು ಪ್ರಕರಣಗಳಲ್ಲಿ 67 ಲಕ್ಷ ರೂ. ಮೌಲ್ಯದ 1 ಕೆಜಿ 133 ಗ್ರಾಂ ಚಿನ್ನ ಸೀಜ್ (Gold Seized) ಮಾಡಿದ್ದಾರೆ.
ಭಾರತ ಮೂಲದ ಮಹಿಳೆ ಕೌಲಾಲಂಪುರ್‌ನಿಂದ ಬೆಂಗಳೂರಿಗೆ ಬಂದಿದ್ದಳು. ಈಕೆ ತನ್ನ ಬ್ಲೌಸ್‌ನ ಒಳಭಾಗದಲ್ಲಿ 300 ಗ್ರಾಂ ನಷ್ಟು ಪೇಸ್ಟ್ ರೂಪದ ಚಿನ್ನವನ್ನ ಇಟ್ಟುಕೊಂಡಿದ್ದಳು. ಇನ್ನೂ ಮಲೇಷಿಯಾ ಮೂಲದ ಮಹಿಳೆ ಸಹ 34 ಲಕ್ಷ ರೂ. ಮೌಲ್ಯದ 578 ಗ್ರಾಂ ಚಿನ್ನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಅನ್ನದೇ ಇನ್ನೇನು ಹೇಳ್ಬೇಕು? – ಪೊಲೀಸ್ ಅಧಿಕಾರಿ ಜೊತೆ ಪಾಕ್ ಅಭಿಮಾನಿ ವಾಗ್ವಾದ
ಮತ್ತೊಂದು ಪ್ರಕರಣದಲ್ಲಿ ಭಾರತ ಮೂಲದ ವ್ಯಕ್ತಿಯೊರ್ವ ಕುವೈತ್‌ನಿಂದ ಬಂದಿದ್ದು, ಡ್ರೈಫ್ರೂಟ್ಸ್ ಪಾಕೆಟ್‌ನಲ್ಲಿ ಸಣ್ಣ ಸಣ್ಣ ಚೂರುಗಳ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, 15 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ ಸೀಜ್ ಮಾಡಿದ್ದಾರೆ. ಜೊತೆಗೆ 1 ಐಪೋನ್ (iPhone) ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಿರುತೆರೆಯಲ್ಲಿ ಕ್ರಿಕೆಟ್: TPL-ಮೂರನೇ ಸೀಸನ್ ಟೀಂ ಲೋಗೋ ಲಾಂಚ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]