ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ

Public TV
1 Min Read
corona vaccine students 1

ನವದೆಹಲಿ: ಭಾರತದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಲಸಿಕೆ ವ್ಯರ್ಥವಾಗಿದೆ. ಅದರಲ್ಲಿ ಅರ್ಧದಷ್ಟು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳೆಂದು ಎಂದು ವರದಿಯಾಗಿದೆ.

ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು 16.48 ಲಕ್ಷ, ಉತ್ತರ ಪ್ರದೇಶದಲ್ಲಿ 12.60 ಲಕ್ಷ ಮತ್ತು ರಾಜಸ್ಥಾನದಲ್ಲಿ 6.86 ಲಕ್ಷ ಕೋವಿಡ್ ಡೋಸ್ ವ್ಯರ್ಥವಾಗಿದೆ. ಈ ಮೂರು ರಾಜ್ಯಗಳನ್ನು ತೆಗೆದುಕೊಂಡರೆ ಒಟ್ಟಾರೆಯಾಗಿ 36 ಲಕ್ಷದಷ್ಟು ನಷ್ಟವಾಗಿದೆ.

Covishield

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಕಳೆದ 11 ತಿಂಗಳಲ್ಲಿ ಕೊರಾನಾ ಡೋಸ್ ವ್ಯರ್ಥ ಮಾಡಿರುವ ರಾಜ್ಯಗಳ ಪಟ್ಟಿಯನ್ನು ಪ್ರಸ್ತುತಪಡಿಸಿದ್ದು, ಒಂದು ಲಕ್ಷಕ್ಕೂ ಅಧಿಕ ಲಸಿಕೆಯನ್ನು ಹಾಳುಮಾಡಿರುವ ರಾಜ್ಯಗಳ ಪಟ್ಟಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

ಸಚಿವರು ನೀಡಿರುವ ಹೇಳಿಕೆಯ ಪ್ರಕಾರ ಕರ್ನಾಟಕದಲ್ಲಿ 1.27ಲಕ್ಷ ಕೋವಿಡ್ ಲಸಿಕೆ ವ್ಯರ್ಥವಾಗಿದೆ.

vaccine

ಯಾವ ರಾಜ್ಯದಲ್ಲಿ ಎಷ್ಟು?
ಮಧ್ಯಪ್ರದೇಶ 16.48 ಲಕ್ಷ, ಉತ್ತರಪ್ರದೇಶ 12.60 ಲಕ್ಷ, ರಾಜಸ್ಥಾನ 6.86, ಅಸ್ಸಾಂ 4.58 ಲಕ್ಷ, ಜಮ್ಮು ಮತ್ತು ಕಾಶ್ಮೀರ 4.57ಲಕ್ಷ, ಆಂಧ್ರ ಪ್ರದೇಶ 3.80 ಲಕ್ಷ, ಗುಜರಾತ್ 2.28 ಲಕ್ಷ, ತಮಿಳುನಾಡು 2.38 ಲಕ್ಷ , ತ್ರಿಪುರ 2.10 ಲಕ್ಷ, ಪಶ್ಚಿಮ ಬಂಗಾಳ 1.14 ಲಕ್ಷ, ಕರ್ನಾಟಕ 1.27 ಲಕ್ಷ. ಇದನ್ನೂ ಓದಿ: ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಡೋಸ್‌ಗಳ ಉಚಿತ ಪೂರೈಕೆಗಾಗಿ ಡಿಸೆಂಬರ್ 19 ರವರೆಗೆ ಲಸಿಕೆಗಳನ್ನು ಖರೀದಿಸಲು 19,675.48 ಕೋಟಿ ವೆಚ್ಚವನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ಲೋಕಸಭೆಗೆ ಹೇಳಿದ್ದಾರೆ.

Share This Article